ದೇವಾಲಯಗಳಿಗೆ ಜಮೀನು ನೀಡಿದ ಭಾರತ ಮೊದಲ ರಾಜ ಟಿಪ್ಪು: ನ್ಯಾ. ದೇವರವರ


ಜಮಖಂಡಿ: ದೇವಾಲಯಗಳಿಗೆ ಮತ್ತು ಮಠಗಳಿಗೆ ಜಮೀನುಗಳನ್ನು ಬಳವಳಿಯಾಗಿ ಕೊಟ್ಟ ಭಾರತದ ಮೊದಲ ರಾಜ ಹಜರತ್ ಟಿಪ್ಪು ಸುಲ್ತಾನ ಎಂದು ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ಸ್ ಮುಖಂಡ ಎನ್.ಎಸ್.ದೇವರವರ ಹೇಳಿದರು.

ತಾಲೂಕಾ ಆಡಳಿತ, ತಾಲೂಕಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಹಾಗೂ ನಗರಸಭೆಯ ಸಂಯುಕ್ತ ಆಶ್ರಯದಲ್ಲಿ ನಗರದ ಬಸವ ಭವನದಲ್ಲಿ ನಡೆದ ಹಜರತ್ ಟಿಪ್ಪು ಸುಲ್ತಾನ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು,  ತನ್ನ 14ನೇ ವಯಸ್ಸಿನಲ್ಲಿ ತಂದೆ ಹೈದರಾಲಿಯ ಜೊತೆ ಸೇರಿ ಯುದ್ದವನ್ನಾಡಿದ ಶೂರ ಎಂದು ಬಣ್ಣಿಸಿದರು.

ಭಾರತದ ಸ್ವಾತಂತ್ರಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯ ಶಾಹಿಗಳ ವಿರುದ್ದ ದಂಗೆ ಎದ್ದ ಮೊದಲ ಭಾರತೀಯ ರಾಜ. ಆಗಿನ ಕಾಲದಲ್ಲಿ ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ ಪರಿಚಯಿಸಿದ ಕೀರ್ತಿ ಟಿಪ್ಪುವಿಗೆ ಸಲ್ಲುತ್ತದೆ. ಹಲವು ಪರಿಣತಿಗಳಲ್ಲಿ ಜ್ಞಾನ ಸಂಪಾದಿಸಿದ ಟಿಪ್ಪು ಮೂಲೂದಿ ಇಸ್ಲಾಮಿಕ್ ಕ್ಯಾಲೆಂಡರ್ ಪರಿಚಯಿಸಿದ ಮೊದಲಿಗ.

ನಗರದ ಮಿನಿ ವಿಧಾನ ಸೌಧದ ತಹಶೀಲ್ದಾರ ಕಾರ್ಯಾಲಯದಲ್ಲಿ 9 ಘಂಟೆಗೆ ಪೂಜೆ ನೆರವೇರಿಸಿ ನಂತರ ಹಜರತ್ ಟಿಪ್ಪು ಸುಲ್ತಾನ ವೃತ್ತಕ್ಕೆ ತೆರಳಿ ತಹಶೀಲ್ದಾರ ಪ್ರಶಾಂತ ಚನಗೊಂಡ, ಮುಖಂಡ ಶ್ರೀಶೈಲ ದಳವಾಯಿ ಮತ್ತು ಹಲವು ಮುಖಂಡರುಗಳು ಸೇರಿ ಮಾಲಾರ್ಪನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಜವಳಿ ನಿಗಮದ ಉಪಾಧ್ಯಕ್ಷ ನಜೀರ ಕಂಗನೊಳ್ಳಿ ಮಾತನಾಡಿದರು, ಮೌಲಾನಾ ಅಲ್ತಾಫ್ ಮದನಿ ಅತಿಥಿ ಉಪನ್ಯಾಸ ನೀಡಿದರು, ಹಾಫೀಜ್ ಯುನೂಸ್ ಹಾಸ್ಮಿ ದಿವ್ಯ ಸಾನಿಧ್ಯದ ಆಶಿರ್ವಚನ ನೀಡಿದರು, ಬಸವರಾಜ ನ್ಯಾಮಗೌಡ, ಸಿದ್ದು ಮೀಸಿ, ರವಿ ಯಡಹಳ್ಳಿ, ಸಮೀರ ಕಂಗನೊಳ್ಳಿ, ಯಾಕೂಬ ನದಾಫ್, ಜಾಕೀರ್ ನದಾಫ್, ನಗರ ಠಾಣಾ ಪಿಎಸೈ ದಿನೇಶ ಜವಳಕರ, ಮುಬಾರಕ ಅಪರಾದ ಸೇರಿದಂತೆ ಹಲವರು ಇದ್ದರು. ತಹಶೀಲ್ದಾರ ಪ್ರಶಾಂತ ಚನಗೊಂಡ ಸ್ವಾಗತಿಸಿದರು, ಜಿಜಿ ಹೈಸ್ಕೂಲ್ ಸಂಗೀತ ಶಿಕ್ಷಕ ವೆಂಕಣ್ಣ ಕಂಬಾರ ಹಾಗೂ ಮಕ್ಕಳು ಪ್ರಾರ್ಥಿಸಿ ನಾಡಗೀತೆ ಹಾಡಿದರು, ಆರ್ ಬಿ.ನಾಯ್ಕೋಡಿ ನಿರೂಪಿಸಿದರು.

Leave a Reply

Your email address will not be published.