ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸ್ತಾರಾ ಜನಾರ್ದನರೆಡ್ಡಿ ?


ಬೆಂಗಳೂರು: ಅಂಬಿಡೆಂಟ್ ಸಂಸ್ಥೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಗೆ ಬೇಕಾಗಿರುವ ಮಾಜಿ ಸಚಿವ ಜನಾರ್ದನರೆಡ್ಡಿಗಾಗಿ ಒಂದೆಡೆ ಶೋಧ ಕಾರ್ಯ ನಿರಂತರ ಮುಂದುವರಿದಿದ್ದು, ಇನ್ನೊಂದೆಡೆ ಅವರ ಪರ ವಕೀಲರು ಇಂದು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.

ಕಳೆದ ಕೆಲವು ದಿನಗಳಿಂದ ವಿವಿಧ ತಂಡಗಳಲ್ಲಿ ಸಿಸಿಬಿ ಪೊಲೀಸರು ಬೆಂಗಳೂರು, ಹೈದರಾಬಾದ ನ ಹೋಟೆಲು, ರೆಸಾರ್ಟ್ , ರೆಡ್ಡಿ ಆಪ್ತರು, ಸಂಬಂಧಿಗಳ ಮನೆಗಳಲ್ಲಿ ತಲಾಶ್ ನಡೆಸಿದರೂ ಅವರ ಸುಳಿವು ಸಿಕ್ಕಿಲ್ಲ.

ಈ ನಡುವೆ ನಗರದ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಅವರ ಪರ ವಕೀಲ ಚಂದ್ರಶೇಖರ್ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.

ರೆಡ್ಡಿ ಅವರ ಮೊಬೈಲ್ ಸ್ವಿಚ್ಡ್ ಆಫ್ ಇಲ್ಲವೇ ನಾಟ್ ರೀಚಬಲ್ ಬರುತ್ತಲ್ಲಿದ್ದು, 15 ಕ್ಕೂ ಹೆಚ್ಚು ಮೊಬೈಲ್ ನಂಬರುಗಳನ್ನು ಪೊಲೀಸರು ಟ್ರಾಪ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಏತನ್ಮಧ್ಯೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ರೆಡ್ಡಿ ಪಿಎ ಅಲಿಖಾನ್ ಗೆ ಸಿಸಿಬಿ ಪೊಲೀಸರು ನೋಟಿಸು ಜಾರಿ ಮಾಡಿದ್ದು, ಇಂದು ಆತ ವಿಚಾರಣೆಗೆ ಹಾಜರಾಗಬೇಕಿದೆ.

Leave a Reply

Your email address will not be published.