ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು:ಸಿದ್ದಾರ್ಥ ಗೋಠೆ

ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು:ಸಿದ್ದಾರ್ಥ ಗೋಠೆ


ಜಮಖಂಡಿ:  ಶಾಲೆಯಿಂದ ಹೊರಗುಳಿದ ಮಕ್ಕಳನ್ನು  ಪತ್ತೆ ಹಚ್ಚಲು ಶಿಕ್ಷಣ ಇಲಾಖೆಯ  ಸಿಬ್ಬಂದಿ ಪ್ರಾಮಾಣಿಕ  ಪ್ರಯತ್ನ ಮಾಡಬೇಕು, ಶಿಕ್ಷಣದಿಂದ ಯಾವ ಮಕ್ಕಳು ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು ಪಿಡಿಓ ಸಿದ್ದಾರ್ಥ ಗೋಠೆ ಹೇಳಿದರು.

ತಾಲೂಕಿನ ಗೋಠೆ ಗ್ರಾಮದ ಸರಕಾರಿ ಪ್ರೌಡ ಶಾಲೆ ಆವರಣದಲ್ಲಿ ಮಕ್ಕಳ ಗ್ರಾಮ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಎಸ್‍ಎಲ್‍ಎಲ್‍ಸಿ ಪರಿಕ್ಷೆಯಲ್ಲಿ ಅನುತಿರ್ಣರಾದ ವಿದ್ಯಾರ್ಥಿನಿಯರನ್ನು ಅವರ ಪಾಲಕರು ವಿವಾಹ ಮಾಡುವ ಸಂಭವವಿರುತ್ತದೆ, ಅದನ್ನು ತಡೆಗಟ್ಟುವ ಸಲುವಾಗಿ ಹಾಗೂ ಅವರನ್ನು ಮರು ಪರಿಕ್ಷೇಗೆ ಹಾಜರಾಗಲು ಪ್ರೇರೆಪಿಸುವ ಸಲುವಾಗಿ ಸ್ಥಳೀಯ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಎರ್ಪಡಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು. ಇದರಿಂದ ಬಾಲ್ಯ ವಿವಾಹ, ಅನರಕ್ಷತೆ ಹೋಗಲಾಡಿಸಲು ಸಹಾಯಕವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅದ್ಯಕ್ಷ ಪಾಂಡು ದಳವಾಯಿ, ಆರ್.ಪಿ.ಪಾಟೀಲ, ಶೋಭಾ ದೊಡಮನಿ, ರಾಜು ಸಾಳ್ವುಂಕೆ, ನಿಂಗಪ್ಪ ವಜ್ರವಾಡ, ಆಶಾ ಕಾರ್ಯಕರ್ತೆಯರು ಹಾಗು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published.