ಜಮಖಂಡಿ ಸಾಹಿತ್ಯ ಸಮ್ಮೇಳನದಲ್ಲಿ ದಲಿತರು ಭಾಗವಹಿಸಬೇಡಿ: ದಲಿತ ಸಂಘರ್ಷ ಸಮಿತಿ ಕರೆ


ಸಮ್ಮೇಳನ ರೂವಾರಿಗಳಿಂದ ಜಾತೀಯತೆ ಆರೋಪ; ದಲಿತರು ಭಾಗವಹಿಸದಿರಲು ಕರೆ

ಜಮಖಂಡಿ: ನಗರದಲ್ಲಿ ಇಂದು ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೆಳವರ್ಗ ಮತ್ತು ದಲಿತ ಸಾಹಿತಿಗಳು, ಬರಹಗಾರರು, ಪ್ರಗತಿಪರ ಚಿಂತಕರು ಹಾಗೂ ದಲಿತಪರ ಹೋರಾಟಗಾರರು ಭಾಗವಹಿಸಬಾರದು ಎಂದು ದಲಿತ ಸಂಘರ್ಷ ಸಮೀತಿಯ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ಎಚ್ಚರಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ದಲಿತ ಸಾಹಿತಿ ಜೆ.ಪಿ.ದೊಡಮನಿಯಂತವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನಿಷ್ಠ ಪಕ್ಷ ಅವರನ್ನು ಗೌರವದಿಂದ ಕಾಣಬೇಕಾಗಿತ್ತು. ಈ ಸಮ್ಮೇಳನದ ರೂವಾರಿಗಳು ಜಾತಿವಾದವನ್ನು ಎತ್ತಿ ಹಿಡಿದಿದ್ದು ಇವರ ಈ ಕ್ರಮಕ್ಕೆ ನಮ್ಮ ವಿರೋಧವಿದೆ. ಇವರ ಮುಂದೆ ಕೆಳವರ್ಗ ಮತ್ತು ದಲಿತಪರ ಚಿಂತಕರಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಾಗಿದೆ.  ಹೀಗಾಗಿ ಈ ಸಮ್ಮೇಳನದಲ್ಲಿ ದಲಿತಪರ ಧ್ವನಿಗಳು ಸಮ್ಮೇಳನವನ್ನು ವಿರೋಧಿಸಬೇಕಾಗಿದೆ ಎಂದರು.

ಈ ಸಮ್ಮೇಳನದಲ್ಲಿ ದಲಿತರ ಚಿಂತನೆಗಳಿಗೆ ತಿಲಾಂಜಲಿ ಹೇಳಲಾಗಿದೆ. ಹೀಗಾಗಿ ಯಾರು ಭಾಗವಹಿಸಬಾರದು ಒಂದು ವೇಳೆ ದಲಿತರು ಭಾಗವಹಿಸಿದರೇ ನಮ್ಮ ಧಿಕ್ಕಾರವಿದೆ. ತಾಲೂಕಾ ಸಾಹಿತ್ಯ ಪರಿಷತ್ತಿನಲ್ಲಿರುವ ಸಾಹಿತಿಗಳು ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಾಗ ದಲಿತರ ಮಹಿಳೆಯರ ಮೇಲೆ ಶೋಷಣೆ ನಡೆದಾಗ ಯಾರೊಬ್ಬ ಮೇಲ್ವರ್ಗದ ಸಾಹಿತಿಗಳು ದಲಿತರ ಪರವಾಗಿ ನಿಂತಿರುವ ಉದಾಹರಣೆಗಳಿಲ್ಲ. ಹಾಗಾಗಿ ಈ ಸಮ್ಮೇಳನದ ಬಗ್ಗೆ ಚರ್ಚೆ ಮಾಡುವದು ನಾಚಿಕೆಗೇಡಿನ ಸಂಗತಿಯಾಗಿದೆ.
ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ದಲಿತ ಸಾಹಿತ್ಯ ಸಮ್ಮೇಳನ ಮಾಡುವದರ ಮೂಲಕ ಜಾತಿವಾದಿಗಳಿಗೆ ಎದುರೇಟು ನೀಡಬೇಕೆಂದು ಮುಖಂಡರಾದ ರವಿ ಬಬಲೇಶ್ವರ, ವಕೀಲ ದೊಡಮನಿ, ಪುಂಡಲಿಕ ಕಾಂಬಳೆ, ಶರಣು ಕಂಬಾಗಿ, ಅಡಿವೆವ್ವ ಮಾದರ, ಹರೀಶ ನಡುವಿನಮನಿ  ಒತ್ತಾಯಿಸಿದ್ದಾರೆ.

Leave a Reply

Your email address will not be published.