ಜಮಖಂಡಿ ತಾಲೂಕಾಡಳಿತದಿಂದ ನ. 26 ರಂದು ಕನಕದಾಸ ಜಯಂತಿ ಆಚರಣೆ


ಜಮಖಂಡಿ: ತಾಲೂಕಾ ಆಡಳಿತದಿಂದ ಅರ್ಥಪೂರ್ಣವಾಗಿ ಭಕ್ತ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಪ್ರಶಾಂತ ಚನಗೊಂಡ ಹೇಳಿದರು.

ನಗರದ ಮಿನಿ ವಿಧಾನ ಸೌಧದ ಸಭಾಭವನದಲ್ಲಿ ಮಂಗಳವಾರ  ನಡೆದ  ಕನಕದಾಸ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ನ. 26ರಂದು ಬೆಳೆಗ್ಗೆ 9.00 ಗಂಟೆಗೆ ತಹಶೀಲ್ದಾರ್  ಕಚೇರಿಯಲ್ಲಿ ಪೂಜೆ ನೆರವೇರಿಸಲಾಗುವುದು. ಬಳಿಕ  10.00ಗಂಟೆಗೆ ಅಮೋಘ ಸಿದ್ದೇಶ್ವರ ದೇವಸ್ಥಾನದಿಂದ ಕುರುಬ ಸಮುದಾಯದವರು ಏರ್ಪಡಿಸಿರುವ 501 ಕುಂಭಗಳ ಮೆರವಣಿಗೆ ವಾದ್ಯ ಮೇಳಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇಸಾಯಿ ವೃತ್ತ ಕನಕ ವೃತ್ತದ ಮೂಲಕ ಹಾಯ್ದು ಕನಕದಾಸ ಭವನ ತಲುಪುವುದು. ನಂತರ ಭಕ್ತ ಕನಕದಾಸ ಭವನದಲ್ಲಿ ಕಾರ್ಯಕ್ರಮ ಜರುಗುವುದು ಎಂದರು.

ಕುಡಿಯುವ ನೀರಿನ ವ್ಯವಸ್ತೆ ಮಾಡಲಾಗುವುದು, ನಗರಸಭೆಯಿಂದ ಸ್ವಚ್ಛತೆಯನ್ನು ನಿರ್ವಹಿಸಲಾಗುವುದು ಎಂದರು.

ಪೂರ್ವಭಾವಿ ಸಭೆ, ಜಯಂತಿ ಸಮಾರಂಭಗಳಲ್ಲಿ ಸರಕಾರಿ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾಗುವ ಮೂಲಕ ತಾಲೂಕಾ ಆಡಳಿತಕ್ಕೆ ಅಸಹಕಾರ ತೋರುತ್ತಿರುವ ವಿವಿಧ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಿ ಅವರ ವಿರುದ್ದ ಸಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ತಾಲೂಕಾ ಪಂಚಾಯತಿ ಅದ್ಯಕ್ಷಿಣಿ ನಾಗವ್ವ ಕುರಣಿ, ಉಪಾಧ್ಯಕ್ಷಿಣಿ ಸುಂದ್ರವ್ವ ಬೆಳಗಲಿ, ಕುರುಬ ಸಮಾಜದ ತಾಲೂಕಾ ಅಧ್ಯಕ್ಷರಾದ ಈಶ್ವರ ವಾಳೆನ್ನವರ, ನಾಗಪ್ಪ ಸನದಿ, ಅರ್ಜುನ ದಳವಾಯಿ, ಹುವಪ್ಪ ಉಷಾಕರ, ನ್ಯಾಯವಾದಿ ಜಕ್ಕನ್ನವರ, ತಾಪಂ ಇಓ ಅಶೋಕ ಪಾಟೀಲ, ಬಿಇಓ ಪ್ರಮಿಳಾ ಸೇಶಪಾಂಡೆ ಸಹಿತ ಹಲವರಿದ್ದರು.

Leave a Reply

Your email address will not be published.