ನಾಡು-ನುಡಿ ಪ್ರೇಮ ಬೆಳೆಸಿಕೊಳ್ಳಿ: ಕುಲಪತಿ ಡಾ. ಡಿ.ಬಿ ನಾಯಕ್ ಸಲಹೆ


ಗುಲ್ಬರ್ಗ ವಿವಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ: ಸಾಂಸ್ಕೃತಿಕ ಕ್ಷೇತ್ರದ ಸಂಪತ್ತು ನಿಜವಾದ ಸಂಪತ್ತು. ಹಿಂದಿನ ಹೆಜ್ಜೆಯನರಿತು ನಾಡು-ನುಡಿಯ ಸಮಸ್ಯೆ ಗಳನ್ನು ಪರಿಹರಿಸುವ ಕೆಲಸ ಆಗಬೇಕು ಎಂದು ಹಾವೇರಿ ಕರ್ನಾಟಕ ಜಾನಪದ ವಿವಿ ಕುಲಪತಿ ಡಾ. ಡಿ.ಬಿ. ನಾಯಕ್ ಅಭಿಪ್ರಾಯಪಟ್ಟರು.

ಗುಲ್ಬರ್ಗ ವಿವಿಯ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಜುರುಗಿದ ಕರ್ನಾಟಕ ರಾಜ್ಯೋತ್ಸವ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಕನ್ನಡ ಕೇವಲ ಭಾಷೆಯಲ್ಲ. ಅದೊಂದು ಸಂಸ್ಕೃತಿ. ಕರ್ನಾಟಕದ ಏಕೀಕರಣಕ್ಕೆ ಈ ಭಾಗದ ಕೊಡುಗೆ ಅಪಾರ ಎಂದರು.

ಕನ್ನಡದ ಮೊಟ್ಟ ಮೊದಲ ಕೃತಿ ಕವಿರಾಜ ಮಾರ್ಗ ಇದೇ ಭಾಗದಿಂದ ಬಂದಿದೆ. ಕಲ್ಯಾಣದ ಶರಣರು, ದಾಸರ ಕೀರ್ತನೆಗಳು, ತತ್ನಾವಪದಕಾರರು, ನಾಗಾವಿ, ಸುರಪುರದ ಗರುಡಾದ್ರಿ ಕಲೆ, ಎಸದ.ಎಂ. ಪಂಡಿತ, ವಿವಿ ಇದೇ ಭಾಗದಿಂದ ಬಂದಿರುವುದನ್ನು ನೆನಪಿಸಿಕೊಳ್ಳಬೇಕು ಎಂದರು.

ಈ ವೈಭವವನ್ನು ಮತ್ತೆ ಮರುಕಳಿಸಲು ಡಾ. ಹಾ.ಮ. ನಾಯಕ ಇದನ್ನು ಪ್ರಾರಂಭಿಸಿದರು. ಈ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಕುಲಪತಿ ಪ್ರೊ.ಎಸ್. ಆರ್. ನಿರಂಜನ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಸದಸ್ಯ ಚಂದ್ರಶೇಖರ ನಿಟ್ಟೂರೆ, ಸಿನೆಟ್ ಸದಸ್ಯ ಡಾ. ಭಗವಂತಪ್ಪ ಬುಳ್ಳಾ ಅತಿಥಿಗಳಾಗಿ ಆಗಮಿಸಿದ್ದರು. ಪ್ರಸಾರಾಂಗ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಕುಲಸಚಿವ ಪ್ರೊ. ಸೋಮಶೇಖರ, ಪ್ರೊ.ಎಂ.‌ಮದರಿ, ವಿತ್ತಾಧಿಕಾರಿ ಪ್ರೊ. ಲಕ್ಮಣ ರಾಜನಾಳಕರ ಇದ್ದರು.

ಪ್ರಶಸ್ತಿ ಹಾಗೂ ಕನ್ನಡ ಕಥಾ ಸ್ಪರ್ಧೆಯಲ್ಲಿ ಚಿನ್ನ ಬೆಳ್ಳಿ ಮತ್ತು ಕಂಚಿನ ಪದಕ ಹಾಗೂ ಗೌರವ ಧನ ಪಡೆದ ಕಥೆಗಳು:

ಸಂಕ್ರಮಣ- ಚಂದ್ರು ಆರ್. ಪಾಟೀಲ (ಚಿನ್ನದ ಪದಕ), ಹೆಬ್ಬಾವಿನ ಹೆಡೆಯ ಕೆಳಗಿನ ನೆರಳು- ಎಚ್. ಎಸ್.ಬೇನಾಳ (ಬೆಳ್ಳಿ ಪದಕ), ಸಂಬಂಜ ಅನ್ನೋದು- ಪ್ರವೀಣ ಪೊಲೀಸ್ ಪಾಟೀಲ ( ಕಂಚಿನ ಪದಕ).

ಪ್ರಶಸ್ತಿ ಪುರಸ್ಕೃತರು:

ಕನ್ನಡ ಪುಸ್ತಕ ವಿಭಾಗ: ರಸ ಗಂಗಾಧರ-ಡಾ. ವಿಕ್ರಮ ವಿಸಾಜಿ, ಕಪ್ಪು ವ್ಯಾಕರಣ- ಡಾ. ವೆಂಕಟಗಿರಿ ದಳವಾಯಿ, ಕಲ್ಯಾಣ ಕದಳಿ- ವಿಜಯಲಕ್ಷ್ಮೀ ಕೌಟಗೆ, ಮಾತೃ ವಾತ್ಸಲ್ಯ- ಡಾ.ಎಸ್. ಎಸ್. ಗುಬ್ಬಿ, ಶರಣ ಸಂತುಷ್ಟಿ- ಡಾ. ಕಲ್ಯಾಣರಾವ ಪಾಟೀಲ, ಗುಲ್ಬರ್ಗ ಜಿಲ್ಲೆಯ ಆಧುನಿಕ ವಚನಗಳು- ಡಾ. ಹಣಮಂತ ಮೇಲಕೇರಿ, ಶರಣ ಸಂಪದ- ಕುಪೇಂದ್ರ ಪಾಟೀಲ.

ಜಾನಪದ‌ವಿಭಾಗ: ಕೊಡೇಕಲ್ ಬಸವಣ್ಣ ರಾಚಪಯ್ಯಮತ್ತಿತರ ತತ್ವ ಪದಗಳು- ಡಾ.ಶಿವಾನಂದ ವಿರಕ್ತಮಠ.

ಜೀವನ ಕಥನ ವಿಭಾಗ: ರಾಷ್ಟ್ರದ ಪ್ರಖ್ಯಾತ ಮಹನೀಯರು- ಬಿ.ಎಚ್. ನಿರಗುಡಿ, ಕೂಡು ಕಟ್ಟುವ ಬಗೆ- ಡಾ. ಎಂ.ಬಿ.‌ಕಟ್ಟಿ.

ಸಮಾಜ ವಿಜ್ಞಾನ ವಿಭಾಗ: ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಡೈನಾಮಿಕ್ ಆಫ್ ಲೈಬ್ರರಿ ಚಿಟಿಜ ಇನ್ಫಾರ್ಮೇಷನ್ ಸೈನ್ಸ್- ಡಾ. ಮೆಧಾವಿನಿ ಎಸ್. ಕಟ್ಟಿ.

ವಿಜ್ಞಾನ ವಿಭಾಗ: ವಿಜ್ಞಾನ ಮತ್ತು ಜನ ಸಾಮಾನ್ಯರು- ಡಾ. ಎಸ್.ಎನ್. ಮುಲಗಿ.

ಅನುವಾದ ವಿಭಾಗ: ಕಸ್ತೂರಬಾ- ಡಾ. ಪ್ರಭಾಕರ ಮ. ನಿಂಬರ್ಗಿ

ಗಡಿನಾಡು ವಿಭಾಗ: ಕಾಲದ ರಸೀದಿ ಪುಟ- ಮಧು ಬಿರಾದಾರ.

ಮರಾಠಿ ವಿಭಾಗ: mazyashich bolts mi ಶಕುಂತಲಾ ಸೋನಾರ.

ಉರ್ದು ವಿಭಾಗ: ಮಾಸೂದ ಅಲಿ ತಿಮ್ಮಾಪುರಿ.

ಇಂಗ್ಲೀಷ ವಿಭಾಗ: development of public libraries digital libranship and its status quo in hyadrabad Karnataka region – ಡಾ. ಎಸ್.ಎಸ್. ಹೊಸಮನಿ.

ಪ್ರಕಾಶಕ ವಿಭಾಗ: ಶಿರಪುರ ಪ್ರಕಾಶನ- ಡಾ. ಸ್ವಾಮಿರಾವ ಕುಲಕರ್ಣಿ.

ಜನಪದ ಕಲಾವಿದ ವಿಭಾಗ: ಶ್ರೀಮಂತ ನಿಂಗಪ್ಪ

ಶಿಲ್ಪಕಲಾ ಕೃತಿ ವಿಭಾಗ: ಜಗನ್ನಾಥ ಜಕ್ಕೆಪಳ್ಳಿ

ಚಿತ್ರಕಲಾಕೃತಿ ವಿಭಾಗ: ಜಲಜಾಕ್ಷಿ ಕುಲಕರ್ಣಿ, ಬಿ.ಎನ್. ಪಾಟೀಲ, ಸತೀಶಕುಮಾರ ಪಿ.

Leave a Reply

Your email address will not be published.