ಬಹುತ್ವದ ಕಾರಣದಿಂದ ಇಂದು ಕನ್ನಡ ಸಂಸ್ಕೃತಿ ಉಳಿದಿದೆ: ಅಭಯಕುಮಾರ


ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿಇಂದು 63 ನೇಯ ಕರ್ನಾಟಕರಾಜ್ಯೋತ್ಸವಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮೊದಲಿಗೆ ವಿಶ್ವವಿದ್ಯಾಲಯದಆವರಣದಲ್ಲಿಕನ್ನಡಧ್ವಜದೊಂದಿಗೆ ಪಥಸಂಚಲನ ನಡೆಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾಲಯದಕನ್ನಡ ಪ್ರಾಧ್ಯಾಪಕರಾದಪ್ರೊ. ಅಭಯ ಕುಮಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಬಹುತ್ವದ ಕಾರಣದಿಂದ ಇಂದು ಕನ್ನಡ ಸಂಸ್ಕøತಿ ಉಳಿದಿದೆ. ಭಾಷೆ ಸೌಹಾರ್ದತೆಗೆ ಮಾಧ್ಯಮವಾಗಬೇಕೆ ಹೊರತು ಸಂಘರ್ಷದ ಮಾಧ್ಯಮವಾಗಬಾರದುಎಂದುಅಭಿಪ್ರಾಯ ಪಟ್ಟರು.

ಕನ್ನಡಕಟ್ಟುವಕ್ರಿಯೆಯಲ್ಲಿರಾಜ್ಯದ ಭೌಗೋಳಿಕ ವ್ಯಾಪ್ತಿ ಮಹತ್ವದ್ದು, ಜೊತೆಗೆ ಸಾಹಿತ್ಯ ಸಂಸ್ಕøತಿಯ ಏಳಿಗೆಯ ಉದ್ದೇಶವನ್ನಿಟ್ಟುಕೊಂಡಾಗಲೇರಾಜ್ಯೋತ್ಸವದಆಚರಣೆಗೆಅರ್ಥಪೂರ್ಣತೆ ಬರುತ್ತದೆಂದುಅಭಿಪ್ರಾಯ ಪಟ್ಟರು.ಇತರೆ ಭಾಷೆಗಳೊಂದಿಗೆ ತುಲನಿಸಿ ಕನ್ನಡವನ್ನುಕಟ್ಟವುದು ಇಂದಿನ ದಿನಗಳಲ್ಲಿ ಬಹಳ ಮುಖ್ಯವಾದ ಸಂಗತಿಯಾಗಿದೆಎಂದರು.ಕನ್ನಡ ನಮ್ಮದೈನಂದಿನ ಭಾಷೆಆಗುವುದರಜೊತೆಗೆ ನಮ್ಮಅಂತರಂಗದ ಭಾಷೆಯಾಗಬೇಕು. ಇಂದಿನ ದಿನಗಳಲ್ಲಿ ಜಾಗತೀಕರಣದಿಂದಉಂಟಾದ ಸ್ಪರ್ಧೆಯನ್ನುಎದುರಿಸಲುಕನ್ನಡಿಗರು ಸಿದ್ಧರಾಗಬೇಕಿದೆ ಎಂದರು. ನಮ್ಮ ಪ್ರಾಚೀನ ಕೃತಿಗಳ ಮಹತ್ವವನ್ನುಅನುವಾದದ ಮೂಲಕ ವಿಶ್ವದಜನರಿಗೆ ತಿಳಿಯುವಂತೆ ಮಾಡುವುದು ನಮ್ಮೆಲ್ಲರಆದ್ಯಕರ್ತವ್ಯವಾಗಿದೆಎಂದುಅಭಿಪ್ರಾಯಪಟ್ಟರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕುಲಪತಿಗಳಾದ ಪ್ರೊ. ಎಚ್.ಎಂ. ಮಹೇಶ್ವರಯ್ಯಅವರು ಸುದೀರ್ಘ ಭಾಷಾ ಪರಂಪರೆ, ವಿಪುಲವಾದ ಪ್ರಕಟಿತ ಸಾಹಿತ್ಯಎಲ್ಲ ಮಾನದಂಡಗಳೊಂದಿಗೆ ಇಂದುಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಪ್ರಾಪ್ತವಾಗಿದೆ. ಇದರ ಹಿರಿಮೆಯನ್ನುಕಾಪಾಡಿಕೊಂಡು ಹೋಗಬೇಕಾದಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಲ್ಲದೆಕನ್ನಡದ ಅಸ್ಮಿತೆಯನ್ನು ಜಾಗತಿಕ ಮಟ್ಟದಲ್ಲಿಬೆಳೆಸಬೇಕಾದ ಅಗತ್ಯವಿದೆಎಂದುಅಭಿಪ್ರಾಯಪಟ್ಟರು. ಮುಂಬರುವ ದಿನಗಳಲ್ಲಿ ಬಹು ಭಾಷೆಗಳ ಶೈಕ್ಷಣಿಕತಾಣವಾಗಿಕೇಂದ್ರೀಯ ವಿಶ್ವವಿದ್ಯಾಲಯವನ್ನುರೂಪಿಸುವ ಆಶಯವನ್ನು ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದಲ್ಲಿಕನ್ನಡದೊಂದಿಗೆಇತರೆ ಭಾಷೆಗಳ ಅನುಸಂಧಾನಕ್ಕಾಗಿ ಮುಂಬರುವ ದಿನಗಳಲ್ಲಿ ಕನ್ನಡ ವಿಭಾಗದಿಂದ ಪ್ರಮಾಣಿತಕೋರ್ಸ್‍ಅನ್ನುಆರಂಭಿಸುವಉದ್ದೇಶವಿದೆಎಂದರು.

“ನನ್ನ ಕನಸಿನ ಕರ್ನಾಟಕ” ಎಂಬ ವಿಷಯದಕುರಿತುರಾಜಭಾಷಾ ವಿಭಾಗದ ಶ್ರೀಮತಿ ರೇಷ್ಮಾ ನದಾಫ್, ರಸಾಯನ ಶಾಸ್ತ್ರದ ವಿಭಾಗದಡಾ. ಹನುಮೇಗೌಡ, ಮನಃಶಾಸ್ತ್ರ ವಿಭಾಗದಡಾ. ದೇವರಾಜ, ಬೋಧಕೇತರ ಸಿಬ್ಬಂದಿಗಳ ವತಿಯಂದ ಶ್ರೀ ಅಜೀಂ ಪಾಷಾ, ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು. ವಿಶ್ವವಿದ್ಯಾಲಯದ ಸಮಕುಲಪತಿಗಳಾದ ಪ್ರೊ.ಜಿ.ಆರ್.ನಾಯಕ್,ಹಣಕಾಸು ಅಧಿಕಾರಿಗಳಾದ ಶ್ರೀ ಶಿವಾನಂದಂ,ಕುಲಸಚಿವರಾದ ಪ್ರೊ.ಎಂ.ವಿ ಅಳಗವಾಡಿ,ಪರೀಕ್ಷಾ ವಿಭಾಗದ ನಿಯಂತ್ರಕರಾದಪ್ರೊ. ಅಸ್ಲಂ, ಕಾರ್ಯಕ್ರಮದ ಸಂಯೋಜಕರಾದಡಾ. ಅಪ್ಪಗೆರೆ ಸೋಮಶೇಖರ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಮಾಧ್ಯಮದವರು ಉಪಸ್ಥಿತರಿದ್ದರು.
ತಮ್ಮತಮ್ಮ ಕ್ಷೇತ್ರಗಳಲ್ಲಿ ಅನುಪಮ ಸಾಧನೆಗೈದ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗು ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿಗೌರವಿಸಲಾಯಿತು.

ವಿವಿಧ ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳಾದ ಅನಿರ್ಬನಸರ್ಕಾರ,ದಾನೀಶ,ಮಧು ಬಿರಾದಾರ,ಮಾರಿಯಾ, ನಾಗೇಂದ್ರ,ರಾಘವೇಂದ್ರತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಪರಿಮಳಾ ಕಮತರನಿರೂಪಿಸಿದರು,ಅನಸೂಯ ಮಿತ್ರ ಸ್ವಾಗತಿಸಿದರು,ಸ್ವಾತಿ ಜೋಶಿ ಪ್ರಾರ್ಥಿಸಿದರು,ಗದ್ದೆಪ್ಪ ವಂದಿಸಿದರು.

Leave a Reply

Your email address will not be published.