
ತಿರುವನಂತಪುರಂ (ಕೇರಳ):ಅಕ್ಷರಲಕ್ಷ್ಮ ಯೋಜನೆಯಡಿ ನಡೆದ ಸಾಕ್ಷರತಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಇತಿಹಾಸ ದಾಖಲಿಸಿದ್ದ 96 ವರ್ಷದ ಹಿರಿಯಜ್ಜಿ ಕಾರ್ತಿಯಾವಾಣಿ ಅಮ್ಮಾ ಗೆ ರಾಜ್ಯ ಶಿಕ್ಷಣ ಸಚಿವ ಸಿ. ರವೀಂದ್ರನಾಥ ಬುಧವಾರ ಲ್ಯಾಪ್ ಟಾಪ್ ಉಡುಗೊರೆ ನೀಡಿದ್ದಾರೆ !
ಈ ಅಜ್ಜಿ ಕಳೆದ ವಾರ ತನಗೂ ಕಂಪ್ಯೂಟರ್ ಕಲಿಯುವ ಆಸೆ ಇದೆ ಎಂದು ಹೇಳಿದ್ದರು. ಆಕೆಯ ಆಸಯನ್ನು ಈಡೇರಿಸುವುದಕ್ಕಾಗಿ ರವೀಂದ್ರನಾಥ್ ಲ್ಯಾಪ್ ಟಾಪ್ ಉಡುಗೊರೆ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಇತ್ತಿಚೆಗೆ ನಡೆದ ಸಾಕ್ಷರತಾ ಪರೀಕ್ಷೆಯಲ್ಲಿ 100 ಕ್ಕೆ 98 ಅಂಕಗಳಿಸಿದ್ದ ಅಜ್ಜಿಗೆ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಸನ್ಮಾನ ಮಾಡಿದ್ದರು.