ಸಿಬಿಐ ಮುಖ್ಯಸ್ಥ ಅಲೋಕ ವರ್ಮಾ ವರ್ಗಾವಣೆ ಖಂಡಿಸಿ ಸುಪ್ರೀಂನಲ್ಲಿ ಖರ್ಗೆ ಅರ್ಜಿ


ಹೊಸದಿಲ್ಲಿ: ದೇಶದ ಪ್ರಮುಖ ತನಿಖಾ ಸಂಸ್ಥೆಯಾದ ಸಿಬಿಐ ಮುಖ್ಯಸ್ಥರನ್ನು ಧೀಡಿರ ವರ್ಗಾಯಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 

ಇಂದು ಅರ್ಜಿ ಸಲ್ಲಿಸಿರುವ ಅವರು ಸಿಬಿಐ ಮುಖ್ಯಸ್ಥ ಅಲೋಕ ವರ್ಮಾ ಅವರನ್ನು ಕೇಂದ್ರ ಸರ್ಕಾರ ವರ್ಗಾಯಿಸಿದ್ದು ಸಂಪೂರ್ಣ ಅಕ್ರಮ ಎಂದು ಹೇಳಿದ್ದಾರೆ. 

ಕೇಂದ್ರದ ನಿರ್ಣಯ ನಿರ೦ಕುಶ , ದಂಡನಾತ್ಮಕ ನ್ಯಾಯವ್ಯಾಪ್ತಿ ಇಲ್ಲದ ಎಂದು ಅರ್ಜಿಯಲ್ಲಿ ಖರ್ಗೆ ಅವರು ಕಿಡಿಕಾರಿದ್ದಾರೆ. 

ಸಿಬಿಐ ಮುಖ್ಯಸ್ಥ ಅಲೋಕ ವರ್ಮಾ  ರಫೆಲ್ ಹಗರಣದ ಕುರಿತು ದಾಖಲೆಗಳನ್ನು ಸಂಗ್ರಹಿಸುತ್ತಿದ್ದ ಕಾರಣ ಅವರನ್ನು ಕಡ್ಡಾಯ ರಜೆ ಮೇಲೆ ಕಳಿಸಲಾಗಿದೆ ಎಂದು ಕಾಂಗ್ರೆಸ್ ಸೇರಿ ಇತರೆ ಪ್ರತಿಪಕ್ಷಗಳು ಆರೋಪ ಮಾಡಿವೆ. 

Leave a Reply

Your email address will not be published.