ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲೇಖಕ ನಿರಗುಡಿಗೆ ಸನ್ಮಾನ


ಕಲಬುರಗಿ: ಲೇಖಕ ಬಿ.ಎಚ್.ನಿರಗುಡಿ ರಚಿಸಿದ ರಾಷ್ಟ್ರದ ಪ್ರಖ್ಯಾತ ಮಹನೀಯರು ಕೃತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದಕ್ಕೆ ನಗರದ ಸತ್ಯಂ ಪದವಿ ಪೂರ್ವ ಕಾಲೇಜಿನಲ್ಲಿ ಗೆಳೆಯರ ಬಳಗವು ವಿಶೇಷ ಸನ್ಮಾನ ಸಮಾರಂಭ ಹಮ್ಮಿಕೊಂಡಿತ್ತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿಯಾಗಿದ್ದ ನಿರಗುಡಿ ಅವರ ನಿಸ್ವಾರ್ಥ ಸೇವೆಯನ್ನು ಸಮಾಜವು ಈಗಾಗಲೇ ಗುರುತಿಸಿ ಗೌರವಿಸಿದೆ. ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಕೃತಿಗಳನ್ನು ನೀಡಿದ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗವು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದು ಶ್ಲಾಘನೀಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅಭಿಪ್ರಾಯ ಪಟ್ಟರು.

ಸತ್ಯಂ ಪಿಯು ಕಾಲೇಜಿನ ಪ್ರಾಚಾರ್ಯ ಅಮರೇಶ ಹಾಲ್ವಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ, ಪ್ರಾಚಾರ್ಯ ಡಾ.ಗಂಗಾಧರ ಬಡಿಗೇರ, ಪತ್ರಕರ್ತರಾದ ಪ್ರಭಾಕರ ಜೋಶಿ, ಶಿವರಂಜನ ಸತ್ಯಂಪೇಟೆ, ಸಹಪ್ರಾಧ್ಯಾಪಕ ಡಾ.ನಾಗಪ್ಪ ಗೋಗಿ, ಹಣಮಂತ ಕೌಂಟೆ, ಕಲಾವಿದ ಎಂ.ಸಂಜೀವ ಅನಿಸಿಕೆ ವ್ಯಕ್ತ ಪಡಿಸಿದರು.

ಚಿಂತಕ ಚಾಮರಾಜ ದೊಡ್ಮನಿ, ಸಾಹಿತ್ಯಾಸಕ್ತರಾದ ಸಂಗಣ್ಣ ಬಿರಾದಾರ, ವೆಂಕಟೇಶ ಗುಪ್ತಾ, ಸುರೇಶ ಅಕ್ಕಾ, ಉದಯಕುಮಾರ ಸಂಗೋಳಗಿ, ಶಿವರಾಯ ಬಸವಪಟ್ಟಣ, ಸಂತೋಷ ಸ್ವಾಮಿ, ನಾಗರಾಜ ಕಾಮಾ, ಡಾ.ಶರಣಬಸಪ್ಪ ವಡ್ಡಣಕೇರಿ, ಸಂಗಮನಾಥ ರೇವತಗಾಂವ ಉಪಸ್ಥಿತರಿದ್ದರು.

ಜ್ಞಾನಜ್ಯೋತಿ ಕರಿಯರ್ ಅಕಾಡೆಮಿಯ ಎನ್.ಎಸ್.ಹಿರೇಮಠ ನಿರೂಪಣೆ ಮಾಡಿದರು. ಸಾಹಿತಿ ಸಿದ್ಧರಾಮ ಬೇತಾಳೆ ಸ್ವಾಗತಿಸಿದರು. ಶಿವಶರಣ ಉದನೂರ ವಂದಿಸಿದರು. ಕಿರಣ ಪಾಟೀಲ ಪ್ರಾರ್ಥಿಸಿದರು. ಸತ್ಯಂ ಪ.ಪೂ.ಕಾಲೇಜು ವತಿಯಿಂದ ವಿದ್ಯಾರ್ಥಿಗಳು, ಪ್ರಾಚಾರ್ಯರು ಸನ್ಮಾನಿಸಿದರು. ಪ್ರಶಸ್ತಿ ಪುರಸ್ಕøತ ಲೇಖಕ ಬಿ.ಎಚ್.ನಿರಗುಡಿ ಕೃತಜ್ಞತಾ ಮಾತುಗಳನ್ನಾಡಿದರು.

Leave a Reply

Your email address will not be published.