ಕೆಪಿಸಿಸಿ ಅಲ್ಪಸಂಖ್ಯಾತ ಕಲಬುರಗಿ ವಿಭಾಗದ ಸಹಕಾರ್ಯದರ್ಶಿಯಾಗಿ ಮಾಸುಮಸಾಬ್ ನೇಮಕ


ಸುರಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ಕಲಬುರ್ಗಿ ವಿಭಾಗೀಯ ಸಹ ಕಾರ್ಯದರ್ಶಿಯನ್ನಾಗಿ ಉತ್ಸಾಹಿ ಮಾಸೂಮ್ ಸಾಬ್ ತಿಂಥಣಿ ಅವರನ್ನು ಕಲಬುರ್ಗಿ ವಿಭಾಗೀಯ ಅಧ್ಯಕ್ಷ ಬಾಬಾ ನಜರ್ ಮಹಮ್ಮದ್ ಖಾನ್ ಅವರು ನೇಮಕ ಗೊಳಿಸಿ ಆದೇಶ ಪತ್ರ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಸಲ್ಲಿಸಿದ ತಮ್ಮ ಸೇವೆಯನ್ನು ಮನಗಂಡು ರಾಜ್ಯ ನಾಯಕರಾದ ಮಾನ್ಯ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳಾದ ಜಿ ಪರಮೇಶ್ವರ್ ಅವರು ಮತ್ತು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಹಾಗೂ ಮುಖಂಡರಾದ ಎಸ್.ಆರ್. ಪಾಟೀಲ್, ಅಲ್ಪಸಂಖ್ಯಾತರ ವಿಭಾಗ ಅಧ್ಯಕ್ಷರಾದ ಸೈಯದ್ ಅಹ್ಮದ್ ಅವರ ಮಾರ್ಗದರ್ಶನದಂತೆ ತಮ್ಮನ್ನು ನೇಮಿಸಲಾಗಿದ್ದು ಪಕ್ಷ ಸಂಘಟನೆಗೆ ಕೆಲಸ ಮಾಡುವಂತೆ ನಿರ್ದೇಶಿಸಿದ್ದಾರೆ.

Leave a Reply

Your email address will not be published.