ಟಿಪ್ಪು ಜಯಂತಿಗೆ ಗೈರಾಗಿ ಸಿಎಂ ಹೊರಟಿದ್ದೆಲ್ಲಿಗೆ ?


ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಗೈರುಹಾಜರಾಗಲಿರುವ ಸಿಎಂ ಕುಮಾರಸ್ವಾಮಿ ಇಂದಿನಿಂದ ಮೂರು ದಿನಗಳ ಕಾಲ ವಿಶ್ರಾಂತಿಗಾಗಿ ಹೊರಟು ನಿಂತಿದ್ದಾರೆ.

ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಜತೆ ಸೇರಿ ಮೈಸೂರಿನ ಖಾಸಗಿ ಸ್ಥಳವೊಂದರಲ್ಲಿ ಸಿಎಂ ವಿಶ್ರಾಂತಿ ಪಡೆಯುವರು.

ವೈದ್ಯರ ಸೂಚನೆ ಮೇರೆಗೆ ಸಿಎಂ ವಿಶ್ರಾಂತಿಗೆ ತೆರಳಿದ್ದು, ಈ ಕುರಿತಂತೆ ಸಚಿವ ಜಮೀರ್ ಅಹ್ಮದ ಗೆ ಮೊದಲೇ ತಿಳಿಸಿದ್ದರು ಎಂದು ಹೇಳಲಾಗಿದೆ. ಹಾಗಾಗಿಯೇ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕುವುದು ಬೇಡ ಎಂದು ಅವರು ಹೇಳಿದ್ದರು ಎನ್ನಲಾಗಿದೆ.

Leave a Reply

Your email address will not be published.