ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷದ ವಿಡಿಯೋ ವೈರಲ್ : ಜನರು ಭಯಭೀತ

 


ಬೆಳಗಾವಿ: ಇಲ್ಲಿನ ಹಿಂಡಾಲ್ಕೊ ಕೈಗಾರಿಕಾ ಪ್ರದೇಶದ ಕಾಲೋನಿಯಲ್ಲಿ  ಚಿರತೆ ಪ್ರತ್ಯಕ್ಷವಾಗಿದ್ದು  ಜನರು ಭಯಭೀತಗೊಂಡಿದ್ದಾರೆ. 

ಇಲ್ಲಿನ ಸಿಂಡಿಕೇಟ್ ಬ್ಯಾಂಕ್ ಸಮೀಪ ಚಿರತೆ ಸುತ್ತಾಡುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತು ನಿನ್ನೆ ರಾತ್ರಿ ಸುಮಾರು  11.30  ಗಂಟೆಗೆ ಚಿರತೆಯನ್ನು ದ್ವಿ-ಚಕ್ರ ವಾಹನ ಸವಾರರು ಕಂಡಿದ್ದಾರೆ. 

ಹಿಂಡಾಲ್ಕೊ ಕೈಗಾರಿಕಾ ಸಮೀಪದ ಅರಣ್ಯ ಪ್ರದೇಶದಿಂದ ಚಿರತೆ ಬಂದಿರಬಹುದು ಎಂದು ಸ್ಥಳಕ್ಕೆ ಭೆಟಿ ನೀಡಿರುವ ಮಾಳಮಾರುತಿ ಪೊಲೀಸರು, ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. 

ಈ ರಸ್ತೆಯಲ್ಲಿ ದ್ವಿಚಕ್ರ ವಾಹನ್ ಸವಾರರು ಎಚ್ಚರಿಕೆ ವಹಿಸ ಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ. 

Leave a Reply

Your email address will not be published.