ಇಂದಿಗೂ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬುವುದು ಎಮ್ ಈಎಸ್ ಪುಂಡರ ಒತ್ತಾಯ ಸರಿಯಲ್ಲ: ಶಾಸಕ ಎಂ.ವಿ.ವೀರಭದ್ರಯ್ಯ


ಮಧುಗಿರಿ: ಕನ್ನಡದ ಏಕೀಕರಣ ಇನ್ನೂ ಸಮರ್ಪಕವಾಗಿಲ್ಲ ಬೆಳಗಾವಿ ನಲ್ಲಿನ ಎಂಇಎಸ್ ಸಂಘಟನೆಗಳ ಪುಂಡರು ಇಂದೂ ಬೆಳಗಾವಿ ಜಿಲ್ಲೆಯನ್ನು ಮಹರಾಷ್ಟ್ರ ರಾಜ್ಯಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿರುವುದು ಸರಿಯಲ್ಲಾ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣಾದಲ್ಲಿ ತಾಲ್ಲೂಕು ಆಡಳಿತ ಹಾಗೂ ಕನ್ನಡ ರಾಜ್ಯೋತ್ಸವ ಸಮಿತಿಯ ವತಿಯಿಂದ 63ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣೆ ನೇರವೇರಿಸಿ ಮಾತನಾಡಿದರು. ಕಾಸರಗೂಡಿನಲ್ಲಿ ಬಹುತೇಕ ಕನ್ನಡಿಗರಿದ್ದರೂ ಸಹ ಕಾಸರಗೂಡು ಕೇರಳದ ಅವಿಭಾಜ್ಯ ಅಂಗವಾಗಿದೆ ನಮ್ಮ ತಾಲ್ಲೂಕಿನ ನೆರೆಯ ಮಡಕಶಿರಾದಲ್ಲಿನ ನಾಗರೀಕರು ಕನ್ನಡವನ್ನೇ ಮಾತನಾಡುತ್ತಿದ್ದಾರೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇಂಗ್ಲೀಷ್ ಅಥವಾ ಇತರ ಭಾಷೆಗಳನ್ನು ಆಡುವ ಬದಲು ನಮ್ಮ ಕನ್ನಡವನ್ನು ಬಳಸಿದರೆ ಸಾಕು ಕನ್ನಡ ತನವನ್ನು ಉಳಿಸಿಕೊಳ್ಳಬಹುದು ಎಂದರು.

ಉಪವಿಭಾಗಾಧಿಕಾರಿ ಹೆಚ್.ಜಿ. ಚಂದ್ರಶೇಖರಯ್ಯ ಮಾತನಾಡಿ ಇಂಗ್ಲೀಷ್ ಭಾಷೆ ಹುಟ್ಟುವ ನೂರು ವರ್ಷಕ್ಕೂ ಮೊದಲೆ ಕನ್ನಡ ಭಾಷೆ ತನ್ನ ಹಿಡಿತ ಸಾಧಿಸಿ ನೆಲ, ಜಲದೊಂದಿಗೆ ಬೆರೆತು ಹೋಗಿದೆ. ಅನ್ಯ ಭಾಷೆಯ ಸುನಾಮಿಯ ಹೊಡೆತದ ನಡುವೆಯೂ ಕನ್ನಡ ಭಾಷೆ ಇಂದಿಗೂ ತನ್ನ ತನವನ್ನು ಉಳಿಸಿಕೊಂಡು ಬಂದಿದೆ ಕನ್ನಡ ಭಾಷೆ ಸಂಸ್ಕøತಿಯನ್ನು ಪೋಷಿಸಿ ಬೆಳೆಸಿದ ಹಿಂದಿನ ಮೈಸೂರು ಸಂಸ್ಥಾನದ ಮಹರಾಜರು ಮತ್ತು ಕನ್ನಡ ಸಾಹಿತ್ಯದ ಮೂಲಕ ಜ್ಞಾನಪೀಠ ಪ್ರಶಸ್ತಿ ತಂದಕೊಟ್ಟಂತ ಪುರಸ್ಕøತರನ್ನು ಸ್ಮರಿಸಿಕೊಳ್ಳಬೇಕಾಗಿದೆ ಕನ್ನಡ ಭಾಷೆಯ ಬೆಳವಣಿಗೆಗೆ ಕರ್ನಾಟಕ ರಾಜ್ಯದ ಪ್ರತಿಯೊಬ್ಬರು ಕೂಡ ಪಾಲುದಾರರಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ತಿಮ್ಲಾಪುರ ಶಿವಣ್ಣ ಪ್ರಧಾನ ಭಾಷಣ ಮಾಡಿದರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 32 ಸಾಧಕರನ್ನು ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಇದೇ ಸಂಧರ್ಭದಲ್ಲಿ ರಾಷ್ಟ್ರೀ ಹಬ್ಬಗಳ ಅಚರಣಾ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಇಇಗಳಾದ ಸುರೇಶ್ ಹಾಗೂ ತಿಪ್ಪೇಸ್ವಾಮಿ, ಡಿಡಿಪಿಐ ರವಿಶಂಕರರೆಡ್ಡಿ, ಡಿವೈಎಸ್ಪಿ ಧರಣೀಶ್, ಪುರಸಭಾ ಮುಖ್ಯಾಧಿಕಾರಿ ಲೋಹಿತ್, ಇಓ ಮೋಹನ್ ಕುಮಾರ್, ಬಿಇಓ ನರಸಿಂಹಯ್ಯ, ತಾಕನಿಪದ ಅಧ್ಯಕ್ಷ ಎನ್.ಶಿವದಾಸ್, ತಾಪಂ. ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಪುರಸಭಾ ಸದಸ್ಯರಾದ ತಿಮ್ಮರಾಯಪ್ಪ, ಎಂ.ಎಲ್.ಗಂಗರಾಜು, ಮಂಜುನಾಥ್, ಎಂ.ಆರ್.ಜಗನ್ನಾಥ್ ಮತ್ತಿತರರು ಇದ್ದರು.

Leave a Reply

Your email address will not be published.