ಬೆಳಗಾವಿ: ಮಾಂಜಾದಾರಕ್ಕೆ ವೈದ್ಯಕೀಯ ವಿದ್ಯಾರ್ಥಿ ಬಲಿ


ಬೆಳಗಾವಿ: ಮಾಂಜಾದಾರಕ್ಕೆ ಗಾಯಗೊಂಡಿದ್ದ ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. 

ವಾರದ ಹಿಂದೆ ಇಲ್ಲಿನ ಸಮೀಪದ ಕಾಕತಿಯಿಂದ ಮರಳಿ ಬೆಳಗಾವಿಗೆ ಬರುತ್ತಿದ್ದ ಮಣಿಪುರ ಮೂಲದ ಭರತೇಶ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿ ದೀಪಕ ಥೊಕ್ಚೋಮ್ (23) ಸಾವನ್ನಪ್ಪಿದ್ದಾನೆ. 

ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಗುರುವಾರ ಚಿಕಿತ್ಸೆ ಫಲಿಸದೇ ಕೊನೆಯುಸಿರುಳೆದಿದ್ದಾನೆ. 

ನಗರದಲ್ಲಿ ಮಾಂಜಾದಾರಕ್ಕೆ ಗಾಯಗೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಆದ್ರೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇದಕ್ಕೆ ಕೆಡಿಸಿಕೊಳ್ಳುತ್ತಿಲ್ಲ. ಮಾಂಜಾದಾರಕ್ಕೆ ವಿದ್ಯಾರ್ಥಿ ಸಾವುಗೊಂಡಿದ್ದು ಜನರು  ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  

Leave a Reply

Your email address will not be published.