ಇದು ನನ್ನ ಗೆಲುವಲ್ಲ, ಕ್ಷೇತ್ರದ ಜನತೆಯ ಗೆಲುವು: ಶಾಸಕ ಆನಂದ ನ್ಯಾಮಗೌಡ


ಜಮಖಂಡಿ: ಇದು ನನ್ನ ಗೆಲುವಲ್ಲ ನನ್ನ ಕ್ಷೇತ್ರದ ಜನತೆಯ ಗೆಲುವು ಮತ್ತು ನಿಜವಾಗಲೂ ಈ ಗೆಲುವು ನಮ್ಮ ತಂದೆಯವರ ಆರ್ಶೀವಾದಿಂದ ಬಂದಿದೆ. ಈ ಗೆಲುವಿಗೆ ಮತ್ತೊಂದು ಕಾರಣ ರಾಜ್ಯದ ಮತ್ತು ರಾಷ್ಟ್ರ ನಾಯಕರು ಜೊತೆ ಕಾರ್ಯಕರ್ತರು ಹಗಲು-ಇರುಳು ಪಕ್ಷಕ್ಕೋಸ್ಕರ ದುಡಿದಿದ್ದಾರೆ. ತಂದೆ ಸಿದ್ದು ನ್ಯಾಮಗೌಡರ ನಿಧನದ ನಂತರ ಅನುಕಂಪದ ಅಲೆಯೂ ಗೆಲುವಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್​ ನೂತನ ಶಾಸಕ ಆನಂದ ನ್ಯಾಮಗೌಡ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. 

ಉಪ ಚುನಾವಣೆಯಲ್ಲಿ 39482 ಮತ್ತು ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕ್ಷೇತ್ರದ ಜನತೆಗೆ ಕೃತಜ್ಞತೆ ಹೇಳಿದರು.

ತಂದೆ ತಂದಿರುವ ಎಲ್ಲ ಯೋಜನೆಗಳು ಪೂರ್ಣಗೊಳಿಸುವುದೇ ನನ್ನ ಮುಂದಿನ ಗುರಿಯಾಗಿದೆ. ಜಮಖಂಡಿಯನ್ನು ಮಾದರಿ ಮತಕ್ಷೇತ್ರವನ್ನಾಗಿ ಮಾಡುವುದೇ ನನ್ನ ಪ್ರಯತ್ನವಾಗಿದೆ. ಜಮಖಂಡಿಯನ್ನ ಜಿಲ್ಲೆಯಾಗಿ ಪರಿವರ್ತನೆ ಮಾಡಲು ನಾನು ದುಡಿಯುತ್ತೇನೆ. ಸವಳಗಿಯನ್ನು ತಾಲೂಕು ಕೇಂದ್ರವನ್ನು ಮಾಡುವ ಕನಸನ್ನು ನಮ್ಮ ತಂದೆ ಕಂಡಿದ್ದರು. ಅವರ ಕನಸನ್ನು ನನಸು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜಮಖಂಡಿ ನೂತನ ಶಾಸಕ ನ್ಯಾಮಗೌಡ ಹೇಳಿದರು. 

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದ ನ್ಯಾಮಗೌಡ 97017 ಮತಗಳನ್ನು ಪಡೆಯುವ ಪಡೆದರೆ ಪ್ರತಿ ಸ್ಪರ್ಧಿ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ 57537 ಮತಗಳನ್ನು ಗಳಿಸಿ 39482 ಮತಗಳಿಂದ ಸೋಲನ್ನೊಪ್ಪಿಕೊಳ್ಳುವಂತಾಯಿತು.

ಕಳೆದಬರಿ ಕ್ಷೇತ್ರದಲ್ಲಿನ ಬಿಜೆಪಿಯ ಭದ್ರ ಕೋಟೆ ಎನ್ನಲಿದ್ದ ಸಾವಳಗಿ ಜಿಪಂ ಕ್ಷೇತ್ರದ ಜನತೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರಿದ್ದಾರೆ.

ಮತದಾನ ಆರಂಭವಾದ ಮೊದಲ ಸುತ್ತಿನಿಂದಲು ಲೀಡ್ ಕಾಯ್ದುಕೊಂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದ ನ್ಯಾಮಗೌಡ 17 ನೇ ಸುತ್ತಿನ ವರೆಗೂ ಲೀಡ್ ನಲ್ಲಿದ್ದುಕೊಂಡೆ ಗೆಲುವಿನ ನಗೆ ಬೀರಿದರು.

ಗೆಲುವಿನ ನಂತರ ನಗರದ ಮಿನಿ ವಿಧಾನಸೌಧಕ್ಕೆ ಆಗಮಿಸಿ ಚುನಾವಣಾ ಅಧಿಕಾರಿ ಮೊಹಮ್ಮದ್ ಇಕ್ರಾಮ್ ಶರೀಪ್ ಅವರಿಂದ ನಾಮಪತ್ರ ಸ್ವೀಕರಿಸಿದರು.

ನಂತರ ಸಹಸ್ರಾರು ಕಾರ್ಯಕರ್ತರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ವಜಯೋತ್ಸವ ಆಚರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಮಾಜಿ ಜವಳಿ ನಿಗಮದ ಉಪಾಧ್ಯಕ್ಷ ನಜೀರ್ ಕಂಗನೊಳ್ಳಿ ಸೇರಿದಂತೆ ಸ್ಥಳೀಯ ನಾಯಕರು ಭಾಗವಹಿಸಿದ್ದರು.

One Response to "ಇದು ನನ್ನ ಗೆಲುವಲ್ಲ, ಕ್ಷೇತ್ರದ ಜನತೆಯ ಗೆಲುವು: ಶಾಸಕ ಆನಂದ ನ್ಯಾಮಗೌಡ"

  1. Gurupadappa Hirekumbi   November 6, 2018 at 9:58 pm

    Many, many congrats. Keep it up. All the best in your future life.

    Reply

Leave a Reply

Your email address will not be published.