ವೆಂಕಟೇಶ ಗುಡೆಪ್ಪನವರಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ


ಮುಧೋಳ:ನಗರದ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಗುಡೆಪ್ಪನವರ ಹುಬ್ಬಳ್ಳಿಯ ಚೇತನ ಪ್ರಕಾಶನ ಪ್ರತಿ ವರ್ಷ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನವೆಂಬರ 11ರಂದು ಹುಬ್ಬಳ್ಳಿಯ ವಿದ್ಯಾನಗರದ ಕನಕದಾಸ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ನಡೆಯುವ ಅಖಿಲ ಕರ್ನಾಟಕ ದ್ವಿತೀಯ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರಿಂದ ಪ್ರಶಸ್ತಿಯನ್ನು ಸ್ವಿಕರಿಸುತ್ತಾರೆ ಎಂದು ಚೇತನ ಪ್ರಕಾಶನದ ಸಂಚಾಲಕ ಚಂದ್ರಶೇಖರ ಮಾಡಲಗೇರಿ ತಿಳಿಸಿದ್ದಾರೆ.

ತಾಲ್ಲೂಕಿನ ಉತ್ತೂರ ಗ್ರಾಮದ ವೆಂಕಟೇಶ ಗುಡೆಪ್ಪನವರ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಜಿಲ್ಲಾ ಅಧ್ಯಕ್ಷರಾಗಿ ಕಾನಿಪ,ಕಸಾಪ ತಲ್ಲೂಕಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಇವರು ನಗರದ ಶ್ರೀ ಸಾಯಿ ಇಂಟರ್‍ನ್ಯಾಶನಲ್ ಸ್ಕೂಲ್ ನ ಪ್ರಾಚಾರ್ಯರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಬಹುಮಾನ ಪಡೆದ ಹತ್ತು ಕಥಾ ಸಂಕಲನ,ಶಿಕ್ಷಣ ಜ್ಯೋತಿ,ನನ್ನ ಗುರಿ ನನ್ನ ಹೆಜ್ಜೆ, ಸವಿಸವಿ ನೆನಪು,ಘಟಪ್ರಭೆ ಸೇರಿದಂತೆ ಹಲವಾರು ಕೃತಿಗಳನ್ನು ಹೊರತಂದಿರುವ ಇವರಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಪುಸ್ತಕ ಬಹುಮಾನ,ಕಸಾಪ ದತ್ತಿ ಪ್ರಶಸ್ತಿ,ಜಿಲ್ಲಾ ಯುವಜನ ಸೇವೆ ಕ್ರೀಡಾ ಇಲಾಖೆ ನೀಡುವ ಜಿಲ್ಲಾ ಮಟ್ಟದ ಯುವಪ್ರಶಸ್ತಿ, ಕನ್ನಡ ಭಾಷಾ ಅತ್ಯುತ್ತುಮ ಶಿಕ್ಷಕ ಪ್ರಶಸ್ತಿ,ಸಮಾಜ ಸಂಜೀವಿನಿ,ಬೆಳಕು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

Leave a Reply

Your email address will not be published.