ಬೇಡಿಕೆ ಈಡೇರಿಸದೆ ಕಾರ್ಖಾನೆ ಆರಂಭ ವಿರೋಧಿಸಿ ಮುಧೋಳ ಬಂದ್ ಸಂಪೂರ್ಣ ಯಶಸ್ವಿ


• ಅಲ್ಲಲ್ಲಿ ರಸ್ತೆ ತಡೆ,ಟೈರಗೆ ಬೆಂಕಿ,ಔಷದಿ ಅಂಗಡಿ ಹೊರತು
• ಪಡಿಸಿ ಊಟ,ತಿಂಡಿಯ ಮಳಿಗೆಗಳು ಬಂದ್
• ರೈತರ ಆಕ್ರೋಶ ಮುಧೋಳ ತಾಲ್ಲೂಕು ಬಂದ್ ಸಂಪೂರ್ಣ ಯಶಸ್ವಿ;
• ಜನರೆ ಇಲ್ಲದ ಶುಕ್ರವಾರ ಸಂತೆ ;ಪರದಾಡಿದ ವಿದ್ಯಾರ್ಥಿಗಳು

ಮುಧೋಳ: ಕಬ್ಬು ಬೆಳೆಗಾರರು ಜಿಲ್ಲಾಡಳಿತ ಹಾಗೂ ಸಕ್ಕರೆ ಕಾರ್ಖಾನೆಗಳ ಮುಂದಿಟ್ಟ ಬೇಡಿಕೆಯನ್ನು ಈಡೇರಿಸದೆ ಜಿಲ್ಲೆಯ ಹಲವಾರು ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿದ್ದನ್ನು ವಿರೋದಿಸಿ ಕಬ್ಬು ಬೆಳೆಗಾರರ ಹೋರಾಟ ಸಮೀತಿ,ಕರ್ನಾಟಕ ರಾಜ್ಯ ರೈತ ಸಂಘ,ಜಿಲ್ಲಾ ಕಬ್ಬು ಬೆಳೆಗಾರರ ಸಮೀತಿಗಳ ಒಕ್ಕೂಟ ಶುಕ್ರವಾರ ಕರೆ ಕೊಟ್ಟಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ರಸ್ತೆ ತಡೆ,ಮುಧೋಳದಲ್ಲಿ ಅಲ್ಲಲ್ಲಿ ಟೈರಗೆ ಬೆಂಕಿ, ಜನಪ್ರತಿನಿಧಿಗಳ ಪ್ರತಿಕೃತಿ ದಹನ ಮಾಡಲಾಯಿತು.ಔಷದಿ ಅಂಗಡಿಗಳನ್ನು ಹೊರತು ಪಡಿಸಿ ನಗರದ ಎಲ್ಲ ಅಂಗಡಿ ಮುಗ್ಗಟ್ಟುಗಳು ಸ್ಥಗಿತಗೊಂಡಿತ್ತು.

ಮುಧೋಳದ ಸಂಗೋಳ್ಳಿ ರಾಯಣ್ಣ ಸರ್ಕಲ್, ರನ್ನ ಸರ್ಕಲ್,ಯಾದವಾಡ ಸರ್ಕಲ್, ಸೇರಿದಂತೆ ಶಿರೋಳ ಕ್ರಾಸ್,ಮಂಟೂರ,ಮೆಳ್ಳಿಗೇರಿ,ಉತ್ತೂರ,ರಂಜಣಗಿ ,ಸೋರಗಾಂವಿಯಲ್ಲಿ ರಸ್ತೆಯಲ್ಲಿ ಕಲ್ಲು ಮುಳ್ಳು ಇಟ್ಟು ಯಾವೂದೇ ವಾಹನಗಳನ್ನು ಬಿಡದೆ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು.

ಪರೀಕ್ಷೆ ಹಾಗೂ ಶಾಲಾ ಕಾಲೇಜಿಗೆ ಸರ್ಕಾರಿ ಬಸ್‍ಗಳಲ್ಲಿ ಬಂದ ವಿದ್ಯಾರ್ಥಿಗಳ  ಪರದಾಡುವಂತಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಜಮಖಂಡಿ ವಿಭಾಗಾಧಿಕಾರಿಗಳ ಆದೇಶದ ಅನ್ವಯ ನಗರದ ಸಂಗೋಳ್ಳಿ ರಾಯಣ್ಣ ಸರ್ಕಲ್‍ಗೆ ಆಗಮಿಸಿದ ತಹಸೀಲ್ದಾರ ಡಿ.ಜಿ.ಮಹಾತ್ ಅವರಿಗೆ ಕಬ್ಬು ಬೆಳೆಗಾರರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು.ಈ ಹಿಂದೆಯೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಂತೆ ಸಕ್ಕರೆ ಕಾರ್ಖಾನೆಗಳು 2016-17ನೇ ಸಾಲಿನ ಹಾಗೂ 2017-18ನೇ ಸಾಲಿನ ಕಬ್ಬು ದರ ನೀಡುವಲ್ಲಿ ಕಾರ್ಖಾನೆಗಳು ತಾರತಮ್ಯ ನೀತಿ ಮಾಡಿ ಕೆಲವು ರೈತರಿಗೆ 2700,2500 ನಂತರ 2000 ಹಣ ನೀಡಿ ದ್ರೋಹ ಬಗೆದಿದ್ದು ಇದನ್ನು ಸರಿ ಪಡಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದೇವೆ,ಆದರೆ ನವೆಂಬರ 13ರಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕಬ್ಬು ಬೆಳೆಗಾರರಿಗೆ 2016-17ನೇ ಸಆಲಿನ 310 ರೂ ನೀಡುವ ಬಗ್ಗೆ ಒಪ್ಪಿಗೆ ನೀಡಿದ್ದು ಈ ನಿಯಮದಂತೆ ನಿರಾಣಿ,ಜೆಮ್ ನವೆಂಬರ ಕೊನೆಯ ವಾರದಲ್ಲಿ,ಜಮಖಂಡಿ ಪ್ರಭು ಶುಗರ್ ಜನವರಿ 2019ರವರೆಗೆ ,ಕಾಲಾವಕಾಶ ಕೇಳಿದ್ದಾರೆ,2017-18ನೇ ಸಾಲಿನ ಕಬ್ಬಿಗೆ ಮೊದಲನೆಯ ಕಂತಾಗಿ ಎಲ್ಲ ರೈತರಿಗೆ 2500 ರೂ ಸಂದಾಯವಾಗುವ ಬಗ್ಗೆ ಪಟ್ಟು ರೈತರು ಹಿಡಿದಾಗ ಈ ಕುರಿತು ಕಾರ್ಖಾನೆಗಳು ಎರಡು ದಿನ ಕಾಲಾವಕಾಶ ಕೇಳಿದ್ದವು,ಅಲ್ಲಿಯವರೆಗೆ ಕಾರ್ಖಾನೆಗಳನ್ನು ಪ್ರಾರಂಭಿಸುವದು ಬೇಡ ಎಂದು ರೈತ ಮುಖಂಡರು ಹೇಳಿದ್ದರೂ ಸಹ ಮಾತಿಗೆ ತಪ್ಪಿದ ಕೆಲವು ಕಾರ್ಖಾನೆಗಳು ದರ ತಿರ್ಮಾಣ ಮಾಡದೆ ಕಬ್ಬು ನುರಿಸುವ ಕಾರ್ಯ ಆರಂಭ ಮಾಡಿದ್ದಾರೆ.ಇದಕ್ಕೆ ರೈತರ ವಿರೋಧವಿದೆ.ತಾವೇ ಘೋಷಣೆ ಮಾಡಿದಂತೆ ಕೆಲವು ರೈತರಿಗೆ ಎಪ್ ಆರ್ ಪಿ ದರ ನೀಡಿ ಉಳಿದ ರೈತರಿಗೆ ಕಡಿಮೆ ನೀಡಿ ಎಲ್ಲರಿಗೂ ಒಂದೇ ದರ ನೀಡಿದ್ದು ಎಂದು ಬಡಾಯಿಕೊಚ್ಚಿಕೊಳ್ಳುತ್ತಿವೆ.

ಎಪ್ ಆರ್ ಪಿ ಕಾನೂನು ಪ್ರಕಾರ 14 ದಿನದಲ್ಲಿ ಹಣ ನೀಡಬೇಕು ಈ ನಿಯಮ ಯಾವ ಕಾರ್ಖಾನೆಗಳೂ ಪಾಲಿಸಿಲ್ಲ ಈ ಕಾರಣಕ್ಕಾಗಿ ಎಲ್ಲ ಕಾರ್ಖಾನೆಗಳ ಮೇಲೆ ಪ್ರಕರಣ ದಾಖಲಿಸಿ ಬಾಕಿ ಹಣ ಹಾಗೂ ಈ ಹಂಗಾಮಿನ ದರ ಘೋಷಣೆ ಮಾಡಬೇಕು ಒಂದು ವೇಳೆ ನ್ಯಾಯಸಮ್ಮತ್ತ ರೈತ ಬೇಡಿಕೆಗಳನ್ನು ಈಡೇರಿಸದೆ ಸಕ್ಕರೆ ಕಾರ್ಖಾನೆಗಳನ್ನು ಆರಂಬಿಸಲು ಮಾಲಿಕರಿಗೆ ಅನುಮತಿ ಕೊಟ್ಟರೆ ಮುಂದೆ ಆಗುವ ಎಲ್ಲ ಘಟನೆಗಳಿಗೆ ನೇರವಾಗಿ ಜಿಲ್ಲಾಡಳಿತ ಹೊಣೆಯಾಗುತ್ತದೆ ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಕೆ..ಟಿ.ಪಾಟೀಲ,ಗೋವಿಂದಪ್ಪ ಗುಜ್ಜನವರ,ಉದಯ ಸಾರವಾಡ,ಸುಭಾಸ ಶಿರಬೂರ,ದುಂಡಪ್ಪ ಯರಗಟ್ಟಿ,ದುಂಡಪ್ಪ ಲಿಂಗರಡ್ಡಿ,ಬಸವಂತ ಕಾಂಬಳೆ,ಬಸವಂತ ಕಾಟೆ,ರಾಮನಗೌಡ ಪಾಟೀಲ,ರಂಗನಗೌಡ ಪಾಟೀಲ,ಬಸವಂತ ಕಾಟೆ,ವಿಶ್ವನಾಥ ಉದಗಟ್ಟಿ,ಗಿರೀಶ ಲಕ್ಷಾಣಿ ಇದ್ದರು.

ಮುನ್ನೆಚ್ಚರಿಕೆಯಗಣುಗುಣವಾಗಿ ಎಲ್ಲ ಕಡೆ ಪೋಲಿಸ್ ಬಂದೂಬಸ್ತ ಮಾಡಲಾಗಿತ್ತು.

Leave a Reply

Your email address will not be published.