ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ದೀಪಾವಳಿ ದಿನ ನಡೆಸಿದ ದಾಳಿ ಕಾಲಕ್ಕೆ 600 ಕೆಜಿಯಷ್ಟು ಅನಧಿಕೃತ ಪಟಾಕಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, 31 ಮಂದಿಯನ್ನು ಬಂಧಿಸಿದ್ದಾರೆ.
ಈಶಾನ್ಯ ದೆಹಲಿಯಲ್ಲಿ 140 ಕೆಜಿ ಅನಧಿಕೃತ ಪಟಾಕಿ ವಶಪಡಿಸಿಕೊಳ್ಳಲಾಗಿದ್ದು, 57 ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ ದ್ವಾರಕಾದಲ್ಲಿ 200 ಕೆಜಿ ಪಟಾಕಿ ಪತ್ತೆಯಾಗಿದ್ದು, 42 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಉತ್ತರ ದೆಹಲಿಯಲ್ಲಿ 72 ಕೆಜಿ ಪಟಾಕಿ ವಶಪಡಿಸಿಕೊಳ್ಳಲಾಗಿದ್ದು, 14 ಮಂದಿಯನ್ನು ಬಂಧಿಸಲಾಗಿದೆ.