ವಾಷಿಂಗ್ಟನ್: ಪರಸ್ಪರ ಒಪ್ಪಿಗೆ ಮೇಲೆಯೇ ಪತ್ರಕರ್ತೆ ಪಲ್ಲವಿಯೊಂದಿಗೆ ಸಂಬಂಧ ಇರಿಸಿಕೊಂಡಿದ್ದೆ. ಹೀಗಾಗಿ ಇಲ್ಲಿ ಅತ್ಯಾಚಾರದ ಆರೋಪ ಎದುರಾಗುವುದಿಲ್ಲ,” ಎಂಬ ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್ ಅವರ ಹೇಳಿಕೆಗೆ ಪತ್ರಕರ್ತೆ ಗೊಗೊಯ್ ತಿರುಗೇಟು ನೀಡಿದ್ದಾರೆ.
”ಅದು ಒಪ್ಪಿಗೆಯಿಂದ ಅಲ್ಲವೇ ಅಲ್ಲ, ಬಲವಂತ, ದಬ್ಬಾಳಿಕೆ ಮತ್ತು ಆಧಿಕಾರದ ದುರುಪಯೋಗದ ಮೂಲಕ ಬಳಸಿಕೊಂಡದ್ದು,” ಎಂದು ಆಕೆ ಹೇಳಿದ್ದಾರೆ. ”ಅಕ್ಬರ್ ಅವರು ತಾವು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುವ ಬದಲು, ಒಪ್ಪಿತ ಸಂಬಂಧವೆಂದು ಹೇಳುವ ಮೂಲಕ ಸಮರ್ಥನೆಗೆ ಮುಂದಾಗಿದ್ದಾರೆ. ಆದರೆ, ಅದು ಅಧಿಕಾರದ ದುರುಪಯೋಗದ ಫಲ,” ಎಂದಿರುವ ಪಲ್ಲವಿ, ”ನಾನು ಸತ್ಯ ಹೇಳುವುದನ್ನು ಮುಂದುವರಿಸುತ್ತೇನೆ. ಅಕ್ಬರ್ ಅವರಿಂದ ಶೋಷಣೆಗೆ ಒಳಗಾದ ಇತರರಿಗೂ ಮಾತನಾಡಲು ಇದು ಪ್ರೇರಣೆಯಾಗಲಿ,” ಎಂದಿದ್ದಾರೆ.