ಯುವಜನತೆ ದಿಶಾ ಯೋಜನೆ ಸದುಪಯೋಗ ಪಡೆದುಕೊಳ್ಳಿ: ನಜೀರ್ ಅಹಮದ್


ಪಾಂಡವಪುರ:ರಾಜ್ಯಸರಕಾರ ದಿಶಾ ಯೋಜನೆಯ ಮೂಲಕ  ಉದ್ಯೋಗ ಹೆಚ್ಚಿಸಲು ಕೌಶಲ್ಯ ಮತ್ತು ಪರಿಣತಿ ತರಬೇತಿ ನೀಡುತ್ತಿದ್ದು ಯುವಜನತೆ ಸದುಪಯೋಗ ಪಡೆದುಕೊಳ್ಳಬೇಕೆಂದು ಮೋಮಿನ್ ಫೌಂಡೇಷನ್ ಕಾರ್ಯದರ್ಶಿ ನಜೀರ್ ಅಹಮದ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸ್ವಾಭಿಮಾನಿ ಮಹಿಳೆಯರ ಸಹಕಾರ ಸಂಘ, ಮೋಮಿನ್ ಫೌಂಡೇಷನ್ ಸಹಯೋಗದೊಂದಿಗೆ ಸಿಡಾಕ್ ಸಂಸ್ಥೆ ಏರ್ಪಡಿಸಿದ್ದ “ದಿಶಾ” ಉದ್ಯಮಿ ಮಾರ್ಗದರ್ಶನ ಔಟ್‍ರಿಚ್ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಸರಕಾರ ವಿವಿಧ ಯೋಜನೆಗಳಲ್ಲಿ ಸಾಲ, ತರಬೇತಿ ಮತ್ತಿತರ ಸಹಾಯ ಪಡೆಯಲು ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಬಹುದು  ಮತ್ತು ಉದ್ಯೋಗಿಗಳನ್ನು ಹೆಚ್ಚಿಸಲು ಬೇಕಾದ ಕೌಶಲ್ಯ ತರಬೇತಿ ಆಯ್ಕೆ ಮಾಡಬಹುದು. ತರಬೇತಿ ಪಡೆಯುವವರು ತಮ್ಮ ತರಬೇತಿ ಕೇಂದ್ರಗಳ ವಿವರಗಳೊಂದಿಗೆ ನೋಂದಾಯಿಸಬಹುದು. ಕರ್ನಾಟಕದಲ್ಲಿ ಕೌನ್ಸಿಲಿಂಗ್, ಕೌಶಲ್ಯ ಮೌಲ್ಯಮಾಪನ, ತರಬೇತಿ ಅಥವಾ ಉದ್ಯೋಗ ನೆರವು ಪಡೆಯಲು ಈಗಾಗಲೇ 7.5 ಲಕ್ಷ ಯುವಕರು ಕೌಶಲ್ಕರ್ ವೆಬ್ ಸೈಟಿನಲ್ಲಿ ನೋಂದಾಯಿಸಿದ್ದಾರೆ.

ಕೌಶಲ್ಯ ಕರ್ನಾಟಕವನ್ನು ಉದ್ಯಮಶೀಲತೆ ಕ್ಷೇತ್ರದಲ್ಲಿ ಉತ್ತೇಜಿಸಲು ಮತ್ತು ರೋಮಾಂಚಕ ಉದ್ಯಮಶೀಲತೆ ಬೆಂಬಲ ಕೋಶವನ್ನು ರಚಿಸಲು, ಕರ್ನಾಟಕದ ವಾಣಿಜ್ಯೋದ್ಯಮ ಅಭಿವೃದ್ಧಿ ಕೇಂದ್ರ ಕರ್ನಾಟಕದಲ್ಲಿನ “ದಿಶಾ” ಉದ್ಯಮಿ ಮಾರ್ಗದರ್ಶನ ಕೋಶಗಳನ್ನು ಸ್ಥಾಪಿಸಲು ಸ್ಕಿಲ್ ಡೆವೆಲಪ್ಮೆಂಟ್ ಎಂಟರ್ಪ್ರೆನ್ಯೂರ್ಷಿಪ್ ಮತ್ತು ಲೈವ್ಲಿಹುಡ್ ಇಲಾಖೆಯ ಬೆಂಬಲವನ್ನು ನೀಡಲು ಸೂಚಿಸುತ್ತದೆ ಯುವಜನತೆ ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ದಿಶಾ ಕಾರ್ಯಕ್ರಮದ ವ್ಯವಸ್ಥಾಪಕ ಸಂತೋಷ್ ಮಾತನಾಡಿ, ದಿಶಾ ಗೋಲ್ ಕರ್ನಾಟಕದ 16 ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷೀ ಉದ್ಯಮಿಗಳಿಗೆ ಬೆಂಬಲ ನೀಡುವುದು ಮತ್ತು ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸುವಲ್ಲಿ ಹೆಚ್ಚಿನ ಗಮನ ಹರಿಸಿದೆ.  ಆದಾಯ, ಸಂಭಾವ್ಯ ಉದ್ಯಮಿಗಳು ಯೋಜನೆಗಳು, ಸಬ್ಸಿಡಿಗಳು, ಕೌಶಲ್ಯ ಕಟ್ಟಡ, ಜಿಎಸ್ಟಿ, ಹಣಕಾಸು ಸಾಲಗಳು ಮತ್ತು ಸಂಪರ್ಕ ವ್ಯಕ್ತಿಗಳ ಬಗ್ಗೆ ಮಾಹಿತಿಯ ವಿಷಯದಲ್ಲಿ ಇತರರ ನಡುವೆ ಉತ್ಪಾದಿಸುವ ಆಸಕ್ತಿ ಹೊಂದಿರುವ ಅಸ್ತಿತ್ವದಲ್ಲಿರುವ ಮತ್ತು ಮಹತ್ವಾಕಾಂಕ್ಷೀ ವಾಣಿಜ್ಯೋದ್ಯಮಿಗಳಿಗೆ ಅಗತ್ಯವಾದ ಮಾಹಿತಿಯನ್ನು ಒದಗಿಸುತ್ತದೆ ಮಹಿಳೆಯರು ಸ್ವಾವಲಂಬನೆಯ ಬದುಕು ಕಂಡುಕೊಳ್ಳಲು ಇದು ಸಹಕಾರಿಯಾಗಿದೆ ಎಂದರು.

ಎಫ್.ಎಲ್.ಸಿ.ಮ್ಯಾನೇಜರ್ ಶೋಭಾ ಮಹಿಳಯರು ಸ್ವಯಂ ಉದ್ಯೋಗ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿದರು. ತಾಪಂ ಅಧ್ಯಕ್ಷೆ ಪೂರ್ಣಿಮಾ ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾಭಿಮಾನಿ ಮಹಿಳೆಯರ ಸಹಕಾರ ಸಂಘದ ಅಧ್ಯಕ್ಷೆ ಎಚ್.ಎಂ.ಪ್ರಭಾವತಿ, ದಿಶಾ ಸಂಸ್ಥೆಯ ನೇತ್ರಾವತಿ ಉಪಸ್ಥಿತರಿದ್ದರು.

Leave a Reply

Your email address will not be published.