ಹೊತ್ತಾಗಿ ಪಟಾಕಿ ಸಿಡಿಸಿದವರ ಮೇಲೆ 71 ಕೇಸ್ ದಾಖಲಾದ್ವು !!


ಹೈದರಾಬಾದ (ತೆಲಂಗಾಣ): ದೀಪಾವಳಿ ಆಚರಣೆ ಸಂದರ್ಭದಲ್ಲಿ ನಿನ್ನೆ ರಾತ್ರಿ 10 ಗಂಟೆಯ ಮೇಲೆ ಪಟಾಕಿ ಸಿಡಿಸಿದ ವ್ಯಕ್ತಿಗಳ ಮೇಲೆ ನಗರದ ವಿವಿಧೆಡೆ ಒಟ್ಟು 71 ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಾಗಿ ಹೈದರಾಬಾದ ಪೊಲೀಸರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಅವಧಿ ಮೀರಿ ಪಟಾಕಿ ಸಿಡಿಸಿದವರ ಮೇಲೆ ಸೆಕ್ಷನ್ 22/77 ರಡಿ ಒಟ್ಟು 71 ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಾಗಿ ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ  ಶಿಖಾ ಗೋಯಲ್ ದೂರವಾಣಿ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ರಾತ್ರಿ ಹತ್ತು ಗಂಟೆಯ ನಂತರ ಪಟಾಕಿ ಸಿಡಿಸಬಾರದು ಎಂದು ಹೈದರಾಬಾದ ಪೊಲೀಸರು ಹಬ್ಬಕ್ಕೂ ಮುನ್ನ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು.

 

Leave a Reply

Your email address will not be published.