ಆನಂದ ಅಪ್ಪುಗೋಳ ಬಂಧಿಸುವಂತೆ ಗ್ರಾಹಕರ ಆಗ್ರಹ


ಬೆಳಗಾವಿ: ಗ್ರಾಹಕರ ಠೇವಣಿ ಹಣ ಹಿಂದಿರುಗಿಸದೇ ತಲೆ ಮರೆಸಿಕೊಂಡಿರುವ ಸಂಗೋಳ್ಳಿ ರಾಯಣ್ಣ ಸೋಸೈಟಿ ಅಧ್ಯಕ್ಷ, ಉದ್ಯಮಿ ಆನಂದ ಅಪ್ಪುಗೋಳನನ್ನು ಬಂಧಿಸುವಂತೆ ಆಗ್ರಹಿಸಿ ಹಣ ಕಳೆದುಕೊಂಡ ಗ್ರಾಹಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇರಿದ ಗ್ರಾಹಕರು  ಆನಂದ ಅಪ್ಪುಗೋಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೋಟ್ಯಾಂತರ ರೂಪಾಯಿ ಬಡವರು ಹಣವನ್ನು ನುಂಗಿ ಹಾಕಿದ ಆನಂದ ಅಪ್ಪುಗೋಳ ಅವರನ್ನು ಕೂಡಲೇ ಬಂಧಿಸಿ ಗ್ರಾಹಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಆನಂದ ಅಪ್ಪುಗೋಳ ಒಡೆತನದ ಸಂಗೋಳ್ಳಿ ರಾಯಣ್ಣ ಸೋಸೈಟಿಯಲ್ಲಿ ಗ್ರಾಹಕರು ಇರಿಸಿದ್ದ ಸುಮಾರು 350 ಕೋಟಿ ಗೂ ಹೆಚ್ಚು ಹಣವನ್ನು ದುರುಪಯೋಗ ಪಡೆಸಿಕೊಂಡಿರುವ ಆರೋಪವಿದೆ. ಸದ್ಯ ಪ್ರಕರಣವನ್ನು ಸಿಐಡಿ ಅಧಿಕಾರಿಗಳ ಬಳಿ ವಿಚಾರಣಾ ಹಂತದಲ್ಲಿದೆ.

Leave a Reply

Your email address will not be published.