ರಾಜ್ಯೋತ್ಸವ ಪ್ರಶಸ್ತಿ : ಮರೆತುಬಿಟ್ಟಿತಾ ಸರಕಾರ?


ಬೆಂಗಳೂರು: ಉಪಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಮುಂದಕ್ಕೆ ಹೋಗಿರುವ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸಭೆಗೆ ಇನ್ನೂ ಮುಹೂರ್ತ ನಿಗದಿಯಾಗದಿರುವುದು ಅಚ್ಚರಿ ಮೂಡಿಸಿದೆ.

ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿ ಮೂರು ದಿನಗಳಾಗಿದ್ದರೂ ಸಮಿತಿ ಸಭೆ ಕುರಿತಂತೆ ಸರಕಾರ ಬಾಯಿ ಬಿಡದಿರುವುದು, ಪ್ರಶಸ್ತಿ ವಿಚಾರವನ್ನು ಮರೆತುಬಿಟ್ಟಿದೆಯೇ ? ಎಂಬ ಸಂಶಯಕ್ಕೂ ಕಾರಣವಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಆಯ್ಕೆ ಸಮಿತಿ ಸಭೆ ನಡೆಯಬೇಕಿತ್ತು. ಆದರೆ, ಇದುವರೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಾಗಲೀ, ಸಿಎಂ ಸಚಿವಾಲಯದಿಂದಾಗಲೀ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಏತನ್ಮಧ್ಯೆ ಇಂದು ಸಿಎಂ ಕುಮಾರಸ್ವಾಮಿ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಕಾದಿರಿಸಲಾಗಿದೆ ಎಂದಷ್ಟೇ ನಮೂದಿಸಲಾಗಿದೆ.

Leave a Reply

Your email address will not be published.