ನಾಳೆ ಅಯ್ಯಪ್ಪಸ್ವಾಮಿ ದೇಗುಲ ಮತ್ತೆ ಓಪನ್: ಮಹಿಳೆಯರಿಗೆ ಸಿಗುತ್ತಾ ಪ್ರವೇಶ ?


ತಿರುವನಂತಪುರಂ (ಕೇರಳ): ಶಬರಿಮಲೈನ ಸುಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ನಾಳೆ ಪೂಜೆ ನಿಮಿತ್ತ ತೆರೆಯಲಿದ್ದು, ಈ ಬಾರಿಯಾದರೂ ಮಹಿಳಾ ಭಕ್ತರಿಗೆ ಪ್ರವೇಶ ಸಿಗಬಹುದಾ ? ಎಂಬ ಪ್ರಶ್ನೆ ಈಗ ಕುತೂಹಲ ಕೆರಳಿಸಿದೆ.

ಎಲ್ಲ ವಯಸ್ಸಿನ ಮಹಿಳೆಯರಿಗೂ ದೇಗುಲ ಪ್ರವೇಶಕ್ಕೆ ಅವಕಾಶ ಕೊಡಬೇಕು ಎಂಬ ಸುಪ್ರೀಂ ಕೋರ್ಟಿನ  ಆದೇಶ ಪಾಲನೆಯ ಒತ್ತಡದಲ್ಲಿ ಕೇರಳ ಸರಕಾರ ಸಿಲುಕಿದ್ದು, ಕೆಲವು ಅಯ್ಯಪ್ಪ ಭಕ್ತರಿಂದ ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತವಾಗಿದೆ.

ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತಾ ವ್ಯವಸ್ಥೆ ಮಾಡಿರುವ ಕೇರಳ ಸರಕಾರ ಭದ್ರತೆಗಾಗಿ 2000 ಪೊಲೀಸರನ್ನು ನಿಯೋಜಿಸಿದೆ.

ಏತನ್ಮಧ್ಯೆ ಶಬರಿಮಲೈನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಡಳಿತ  ಆದೇಶ ಹೊರಡಿಸಿದೆ.

Leave a Reply

Your email address will not be published.