ನಾಡು ನುಡಿಗಾಗಿ ಎಲ್ಲರೂ ಶ್ರಮಿಸಬೇಕು:ಯೋಧ ದುರ್ಗಪ್ಪ ನಾಯಕ


ಶಹಾಪುರ:ಕರ್ನಾಟಕದ ಏಕೀಕರಣಕ್ಕಾಗಿ ನಾಡು ನುಡಿಗಾಗಿ ಹಲವಾರು ಮಹಾನ್ ವ್ಯಕ್ತಿಗಳು ಶ್ರಮಿಸಿದ್ದಾರೆ ಆದ್ದರಿಂದ ಅವರನ್ನು ನೆನಪಿಸಿಕೊಳ್ಳ೦ಡು ಅವರಂತೆ ಈ ಕನ್ನಡ ನಾಡಿಗಾಗಿ ನಾವು ನೀವೆಲ್ಲರೂ ಹಗಲಿರುಳು ಶ್ರಮಿಸಬೇಕೆಂದು ಬಿಎಸ್ಎಫ್ ಯೋಧರಾದ ದುರ್ಗಪ್ಪ ನಾಯಕ ಹೇಳಿದರು.

ಭಾಷೆ ಒಂದೇ ಭಾವ ಹಲವು ಇರಬಹುದು ಆದರೆ ಕನ್ನಡ ಉಳಿವಿಗಾಗಿ ನಾವು ನೀವೆಲ್ಲರೂ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸಬೇಕೆಂದು ಸಲಹೆ ನೀಡಿದರು.

ಅಂದಾಗ ಮಾತ್ರ ಕನ್ನಡ ನಾಡು ನುಡಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೆಗುಂದಿ ಮಾತನಾಡಿ ಇಂಗ್ಲಿಷ್ ವ್ಯಾಮೋಹಕ್ಕೆ ಜೋತು ಬಿದ್ದು ಕನ್ನಡ ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನೋರ್ವ ಅತಿಥಿಗಳಾದ ಬೀದರ್ ಖಜಾನೆ ಇಲಾಖೆಯ ಅಧಿಕಾರಿಯಾದ ಡಾ: ಮೊನಪ್ಪ ಶಿರವಾಳ ಮಾತನಾಡಿ ತಾಲ್ಲೂಕು ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ತುಂಬಾ ಶ್ಲಾಘನೀಯವಾದದ್ದು ಎಂದು ನುಡಿದರು.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಚಂದ್ರಕಾಂತ ಕರದಳ್ಳಿ, ಶಿವಣ್ಣ ಇಜೇರಿ, ಸಿದ್ರಾಮ ಹೊನ್ಕಲ್, ಗುಂಡಪ್ಪ ತುಂಬಿಗಿ, ಅಯ್ಯಣ್ಣ ವಟಾರ್, ಸಾಯಿಬಣ್ಣ ಮಡಿವಾಳಕರ ಹಾಗೂ ಇತರರು ಉಪಸ್ಥಿತರಿದ್ದರು.

One Response to "ನಾಡು ನುಡಿಗಾಗಿ ಎಲ್ಲರೂ ಶ್ರಮಿಸಬೇಕು:ಯೋಧ ದುರ್ಗಪ್ಪ ನಾಯಕ"

  1. Dr.MS Sirwal KTS   November 1, 2018 at 1:28 pm

    ವರದಿ ತುಂಬಾ ಚೆನ್ನಾಗಿ ಬಂದಿದೆ. ವರದಿಗಾರರಾದ ಬಸವರಾಜ ಸಿನ್ನೂರರಿಗೆ ಧನ್ಯವಾದಗಳು ಡಾ.ಎಂ.ಎಸ್.ಸಿರವಾಳ KTS

    Reply

Leave a Reply

Your email address will not be published.