ಶಹಾಪುರ: SBI ಬ್ಯಾಂಕ್ ಮುಂದೆ ರೈತರಿಂದ ಪ್ರತಿಭಟನೆ


ಶಹಾಪುರ:ರೈತರ 2 ಲಕ್ಷ ರೂಪಾಯಿ ಸಾಲವನ್ನು ಮನ್ನಾ ಮಾಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ಶಹಾಪುರ ಪಟ್ಟಣದ SBI ಬ್ಯಾಂಕ್ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಮಾನ್ಯ ಉಪ ತಹಸೀಲ್ದಾರರು ಸ್ಥಳಕ್ಕೆ ಧಾವಿಸಿ ಮನವಿಯನ್ನು ಸ್ವೀಕರಿಸಿ ಭರವಸೆಯನ್ನು ನೀಡಿ ಮುಂದಿನ ಕ್ರಮಕ್ಕಾಗಿ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗುತ್ತದೆ ಎಂದು ತಿಳಿಸಿದರು.

ರೈತ ಮುಖಂಡರಾದ ಚನ್ನಪ್ಪ ಆನೆಗುಂದಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಸಾಗರ್ ಹಾಗೂ ರೈತ ಮುಖಂಡರು ಹೆಚ್ಚಿನ ರೀತಿಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.