ಸಾಹಿತಿಗಳ ಬರವಣಿಗೆ ಸಮಾಜದ ಅಂಕುಡೊಂಕು ತಿದ್ದುವಂತಿರಬೇಕು: ನಾಗರಾಜ್


ಶಹಾಪುರ : ಇಂದಿನ ಯುವ ಸಾಹಿತ್ಯಗಳ ಬರವಣಿಗೆ  ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತಿರಬೇಕು ಎಂದು ರಾಜ್ಯ ಯುವ ಬರಹಗಾರರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ಹೂಹಳ್ಳಿ ನಾಗರಾಜ್ ಅವರು ಹೇಳಿದರು.

ರಾಜ್ಯ ಯುವ ಬರಹಗಾರರ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಸಂಯೋಗದಲ್ಲಿ ಜರುಗಿರುವ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಂತರ ಜರುಗಿದ ಕವಿಗೋಷ್ಠಿಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಕವಿಗಳು ಸ್ವರಚಿತ ಕವನವನ್ನು ವಾಚಿಸಿದರು.ಜೊತೆಗೆ ಸಾಧಕರಿಗೆ ಸನ್ಮಾನವನ್ನೂ ಕೂಡ ಏರ್ಪಡಿಸಲಾಗಿತ್ತು.

ಅದರಂತೆ ರಾಜ್ಯ ಯುವ ಬರಹಗಾರ ಒಕ್ಕೂಟದ ಮುಂದಿನ ರೂಪು ರೇಷೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.

ಸಮಾರಂಭದ ವೇದಿಕೆಯ ಮೇಲೆ ಡಾ. ನಟರಾಜ್ ಬೂದಾಳ್, ಸಾಧಕರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಗಂಗ ಹುಚ್ಚಮ್ಮ,ತುಮಕೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಸವರಾಜಪ್ಪ ಅಪ್ಪಿನಕಟ್ಟೆ, ತುಮಕೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಾ.ಹ. ರಮಾಕುಮಾರಿ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published.