ಗೋಕಾಕ: ಮಹರ್ಷಿ ವಾಲ್ಮೀಕಿ ಮೂರ್ತಿ ಉದ್ಘಾಟಿಸಿದ ಯುವ ಮುಖಂಡ ಸಂತೋಷ ಜಾರಕಿಹೊಳಿ


ಗೋಕಾಕ: ಸಮೀಪದ ಶಿಲ್ತಿಭಾಂವಿ ಗ್ರಾಮದಲ್ಲಿ  ಮಹರ್ಷಿ ವಾಲ್ಮೀಕಿ ಮೂರ್ತಿಯನ್ನು ಯುವ ಮುಖಂಡ ಸಂತೋಷ ಜಾರಕಿಹೊಳಿ ಗುರುವಾರ ಉದ್ಘಾಟಿಸಿದರು. 

ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯಿಂದ ಪ್ರತಿಸ್ಠಾಪಿಸಲಾದ ಮೂರ್ತಿಯನ್ನು ಉದ್ಘಾಟಿಸಿದ ಸಂತೋಷ ಜಾರಕಿಹೊಳಿ ಅವರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. 

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ವಿಜಯ ತಳವಾರ  ಜಾತ್ಯಾತೀತವಾಗಿ ಹೋರಾಟ ಮಾಡುವುದು ಇಂದು ಅವಶ್ಯವಾಗಿದೆ. ರಾಮಾಯಣವನ್ನು ಕೊಡುಗೆ ನೀಡಿದ ವಾಲ್ಮೀಕಿ ಅವರ ಮಾರ್ಗದರ್ಶನದಲ್ಲಿ ಇಂದು ನಡೆಯಬೇಕಾಗಿದೆ ಎಂದರು. 

ಬುದ್ಧ ಬಸವ ಅಂಬೇಡ್ಕರ್ ವಾಲ್ಮೀಕಿ  ಮಾರ್ಗದಲ್ಲಿ ನಡೆಯುತ್ತಿರುವ ಜಾರಕಿಹೊಳಿ ಕುಟುಂಬದವರಿಂದ ಇನ್ನು ಮುಂದಿನ 5 ಅಥವಾ 10 ವರ್ಷಗಳಲ್ಲಿ ಮುಖ್ಯಮಂತ್ರಿಯನ್ನಾಗಿಸಲು ನಮ್ಮ ಸಮುದಾಯ ಹೋರಾಟ ನಡೆಸಬೇಕೆಂದು ಕರೆ ನೀಡಿದರು. 

ಗೋಕಾಕ ಎಪಿಎಂಸಿ ಸದಸ್ಯ ಬಸವರಾಜ ಸಾಯನ್ನವರ,  ಶಿಲ್ತಿಭಾಂವಿ ಗ್ರಾ. ಪಂ. ಅಧ್ಯಕ್ಷರು, ಸದಸ್ಯರು , ವೇದಿಕೆ ತಾಲೂಕಾಧ್ಯಕ್ಷ ಮಹಾಂತೇಶ ತಳವಾರ, ಸತೀಶ ಹಿರಲಿ ಸೇರಿದಂತೆ ಗ್ರಾಮದ ಹಿರಿಯ್ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

Leave a Reply

Your email address will not be published.