ಅನಂತಕುಮಾರ್ ನಮಗೆ ಮಾರ್ಗದರ್ಶಕರಾಗಿದ್ದರು: ಶ್ರೀಕಾಂತ ಕುಲಕರ್ಣಿ


ಜಮಖಂಡಿ: ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನಕ್ಕೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಅನಂತಕುಮಾರ್ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.

ನಗರದ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ಇಂದು ಮಧ್ಯಾಹ್ನ 3 ಘಂಟೆಗೆ ಸಾರ್ವಜನಿಕ ಶ್ರಧ್ಧಾಂಜಲಿ ಸಭೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಆದರ್ಶ ರೂಗಿಮಠ, ಅಜಯ್ ಕಡಪಟ್ಟಿ, ಪ್ರವೀಣ ಕಲ್ಯಾಣಿ, ನಾಗರಾಜ ತಂಗಡಗಿ ಸೇರಿ ಬಿಜೆಪಿಯ ಕಾರ್ಯಕರ್ತರು ಇದ್ದರು.

Leave a Reply

Your email address will not be published.