ಕಮ್ಮುನಿಸ್ಟವಾದಿ ಲೆನಿನ್ ಆದರ್ಶವೆಂದು ನಂಬಿದ್ದ ಭಗತ್ ಸಿಂಗ : ಕಾಮ್ರೆಡ್ ಎಸ್. ಎಮ್. ಶರ್ಮಾ


ಕಲಬುರಗಿ: ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಸಮಾಜವಾದಿ ರಾಷ್ಟ್ರವನ್ನು ಸ್ಥಾಪಿಸಿದ ರಷ್ಯಾದ ಮಹಾಕ್ರಾಂತಿಯ 101 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಸ್. ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ನಗರದ ಮಾರ್ಕೆಟ್ ನಲ್ಲಿ ರಷ್ಯನ್ ಕ್ರಾಂತಿಗೆ ಸಂಬಂಧಪಟ್ಟ ಹಾಗೂ ಕ್ರಾಂತಿಯನ್ನು ಹೊಗಳಿ ಲೆನಿನ್ ಸ್ಟಾಲಿನ್ ರ ಬಗ್ಗೆ ಅಪಾರ ಗೌರವ ಹೊಂದಿದ್ದ ಅಂದಿನ ಮಹಾನ್ ಮಾನವತಾವಾದಿಗಳ ಹಾಗೂ ಮಾಕ್ರ್ಸವಾದಿ ಚಿಂತಕರ ಸೂಕ್ತಿಗಳನ್ನು ಪ್ರದರ್ಶಿಸಲಾಯಿತು.

ಅದರೊಂದಿಗೆ ಪುಸ್ತಕ ಮಾರಾಟವನ್ನೂ ಹಮ್ಮಿಕೊಳ್ಳಲಾಗಿತ್ತು. ಕಲಬುರಗಿ ಜನತೆ ಅಮೋಘವಾದ ಪ್ರತಿಕ್ರಿಯೆ ನೀಡಿದರು.

ಸೂಕ್ತಿ ಹಾಗೂ ಪುಸ್ತಕ ಪ್ರದರ್ಶನದ ಸಭೆಯನ್ನು ಉದ್ದೇಶಿಸಿ ಕಲಬುರಗಿ ಜಿಲ್ಲಾ ಸಮಿತಿಯ ಸದಸ್ಯರಾದ ಕಾಮ್ರೇಡ್ ಎಸ್. ಎಮ್. ಶರ್ಮಾರವರು ಮಾತನಾಡಿ ಲೆನಿನ್ ರವರು ಮಾಕ್ರ್ಸವಾದವನ್ನು ಅಂದಿನ ವೈಜ್ಞಾನಿಕ ಬೆಳವಣಿಗೆಗಳಿಗೆ ಅನುಗುಣವಾಗಿ ಮಾಕ್ರ್ಸವಾದನ್ನು ಮುನ್ನಡೆಸಿದರು ಹಾಗೂ ರಷ್ಯಾದ ಕ್ರಾಂತಿಗೆ ಕಾರ್ಮಿಕ ವರ್ಗಕ್ಕೆ ನಾಯಕತ್ವ ನೀಡಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಿ ಕಾರ್ಮಿಕ ವರ್ಗದ ಸರ್ವಾಧಿಕಾರವನ್ನು ಸ್ಥಾಪಿಸಿದರು ಎಲ್ಲಾ ರೀತಿಯ ಮಾನವನಿಂದ ಮಾನವನ ಮೇಲೆ ನಡೆಯುತ್ತಿದ್ದ ಶೋಷಣೆಯನ್ನು ಕೊನೆಗಾಣಿಸಿದರು. ಕೆಲವೇ ವರ್ಷಗಳಲ್ಲಿ ಆರ್ಥಿಕಾವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದ್ದ ರಷ್ಯಾ ದೇಶವು ಬೇರೆಲ್ಲಾ ದೇಶಗಳನ್ನು ಮೀರಿಸಿತ್ತು. ಲೆನಿನ್ ರ ನಂತರ ಸ್ಟಾಲಿನ್ ರು ರಷ್ಯಾ ದೇಶವನ್ನು ಮತ್ತಷ್ಟು ಮುಂದೊಯ್ದರು. ಅಲ್ಲದೇ ಈಡೀ ವಿಶ್ವ ಫ್ಯಾಸೀವಾದಿ ಹಿಟ್ಲರ್ ನ ಅಟ್ಟಹಾಸಕ್ಕೆ ನಡುಗಿದಾಗ ಸ್ಟಾಲಿನ್ ರ ನೇತೃತ್ವದಲ್ಲಿ ರಷ್ಯಾ ಹಿಟ್ಲರ್ ನನ್ನು ಸೋಲಿಸಿದರು ಎಂದರು. 

ಅಂದಿನ ಕಾಲದ ಮಹಾನ್ ಮಾನವತಾವಾದಿಗಳಾದ ಬರ್ನಾಡ್ ಶಾ, ರೊಮೇನ್ ರೊಲ್ಯಾಂಡ್, ಚಾರ್ಲಿ ಚಾಪ್ಲಿನ್, ಆಲ್ಬರ್ಟ ಐನ್ಸ್ಟೀನ್ ಇಡೀ ಮಾನವಕುಲದ ಉಳಿವಿಗಾಗಿ ರಷ್ಯಾದತ್ತ ನೋಡಿದರು ಅಲ್ಲದೆ ಕ್ರಾಂತಿಯನ್ನು ಮಾಡುವಲ್ಲಿ ಹಾಗೂ ಮುನ್ನಡೆಸುವಲ್ಲಿ ಲೆನಿನ್ ಹಾಗೂ ಸ್ಟಾಲಿನ್ ರ ನಾಯಕತ್ವದ ಬಗ್ಗೆ ಅಪಾರ ಗೌರವ ಹೊಂದಿದ್ದರು. ನಮ್ಮ ದೇಶದ ಮಾನವತಾವಾದಿಗಳಾದ ರವೀಂದ್ರನಾಥ ಟಾಗೋರ್, ಪ್ರೇಮ್‍ಚಂದ್, ಕರ್ನಾಟಕದ ಕುವೆಂಪುರವರು ರಷ್ಯಾದ ಬಗ್ಗೆ ಅಪಾರ ಗೌರವ ಹೊಂದಿದ್ದರು. ನೇತಾಜಿರವರು ಭಾರತದಲ್ಲೂ ರಷ್ಯಾದಂತಹ ಕ್ರಾಂತಿ ನಡೆಯಬೇಕೆಂಬ ಆಸೆ ಹೊಂದಿದ್ದರು ಎಂದರು.

ಭಗತ್ ಸಿಂಗ  ಲೆನಿನ್ ರವರನ್ನು ತಮ್ಮ ಆದರ್ಶವೆಂದು ನಂಬಿದ್ದರು ಹಾಗೂ ಜೀವನದ ಕೊನೆ ಘಳಿಗೆಯಲ್ಲಿ ಅವರ ಪುಸ್ತಕ ಓದುತ್ತಿದ್ದರು. ನಮ್ಮ ದೇಶದ ಮಹಾನ್ ವ್ಯಕ್ತಿಗಳು ಕಂಡ ಈ ಕನಸನ್ನು ಸಾಕಾರಗೊಳಿಸಬೇಕಿದೆ. ಆ ಧ್ಯೇಯಕ್ಕೆ ಈ ದಿನ ಸ್ಪೂರ್ತಿ ನೀಡಲಿದೆ. ನಮ್ಮ ದೇಶದಲ್ಲಿಯೂ ಕೂಡ ಬಂಡವಾಳಶಹಿ ವಿರೋಧಿ ಸಮಾಜವಾದಿ ಕ್ರಾಂತಿ ಯ ಗುರಿ ಹೊಂದಿರುವ ನಮ್ಮ ಪಕ್ಷ ಎಸ್.ಯು,ಸಿ,ಐ(ಕಮ್ಯುನಿಸ್ಟ್) ವಿದ್ಯಾರ್ಥಿ, ಯುವಜನ, ಮಹಿಳೆಯರು ಹಗೂ ರೈತ, ಕಾರ್ಮಿಕರನ್ನು ಕ್ರಾಂತಿಯತ್ತ ಕೊಂಡೊಯ್ಯುವಲ್ಲಿ ಅನೇಕ ಹೋರಾಟಗಳನ್ನು ಸಂಘಟಿಸುತ್ತಿದೆ. ಈ ಸಂದರ್ಭದಲ್ಲಿ ಸಮಾಜವಾದಿ ಕ್ರಾಂತಿಗೆ ಸಿದ್ಧರಾಗಬೇಕೆಂದು ರೈತ, ಕಾರ್ಮಿಕರಿಗೆ ನಮ್ಮ ಪಕ್ಷ ಕರೆ ನೀಡುತ್ತಿದೆ ಎಂದರು.

Leave a Reply

Your email address will not be published.