ಅಕ್ರಮ ಮರಳು ಸಾಗಟಕ್ಕೆ ಬ್ರೇಕ್ ಹಾಕುವಂತೆ ದಲಿತ ಸೇನೆ ಆಗ್ರಹ


ಸುರಪುರ: ತಾಲೂಕಿನ ಹೆಮನೂರು,ಕರ್ನಾಳ,ಶೆಳ್ಳಿಗಿ, ಸೂಗುರು ಮತ್ತು ಚೌಡೇಶ್ವರಿಹಾಳ ಸೇರಿದಂತೆ ಅನೇಕ ಕಡೆಗಳಿಂದ ಅಕ್ರಮ ಮರಳು ಸಾಗಣೆ ದಂಧೆ ಎಗ್ಗಿಲ್ಲದೆ ನಡೆದಿದ್ದು, ಕೂಡಲೇ ಈ ಅಕ್ರಮಕ್ಕೆ ಕಡಿವಾಣ ಹಾಕುವಂತೆ ದಲಿತ ಸೇನೆ ಮುಖಂಡರು  ಒತ್ತಾಯಿಸಿದರು.

ನಗರದ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಿತ್ಯ ನೂರಾರು ವಾಹನಗಳಲ್ಲಿ ಹಗಲಿರಳು ಮರಳು ಸಾಗಣೆ ಮಾಡಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಇದರಿಂದ ಸರಕಾರಕ್ಕೂ ಬಹು ದೊಡ್ಡ ವಂಚನೆ ಮಾಡುವ ಜೊತೆಗೆ ಅಕ್ರಮ ದಂಧೆಯೇ ಆಡಳಿತಕ್ಕೆ ಸವಾಲು ಹಾಕಿದಂತಾಗುತ್ತಿದೆ. ಇದರಲ್ಲಿ ಪೊಲೀಸ್ ,ಕಂದಾಯ ಮತ್ತು ಗಣಿ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಅನುಮಾನ ಮೂಡುತ್ತಿದೆ.  ಕೂಡಲೇ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್ ಹಾಕುವ ಮೂಲಕ ಸರಕಾರಕ್ಕೆ ವಂಚಿಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸೇನೆಯ ತಾಲ್ಲೂಕಾಧ್ಯಕ್ಷ ನಿಂಗಣ್ಣ ಗೋನಾಲ,ಜಿಲ್ಲಾ ಉಪಾಧ್ಯಕ್ಷ ಭೀಮಣ್ಣ ಕಡಿಮನಿ,ತಾಲ್ಲೂಕ ಉಪಾಧ್ಯಕ್ಷ ಪರಮಣ್ಣ ಹಂಧ್ರಾಳ,ಸುರೇಶ ಅಮ್ಮಾಪೂರ,ಹುಲಗಪ್ಪ ದೇವತ್ಕಲ್,ಶಿವಣ್ಣ ನಾಗರಾಳ ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published.