ಜಾತ್ರೆಗೆ ಬಂದಿದ್ದ ಯುವಕನ ಕತ್ತು ಸೀಳಿ ಕೊಲೆ


ಸುರಪುರ: ಜಾತ್ರೆಗೆ ಆಗಮಿಸಿದ ಯುವಕನೊಬ್ಬನ ಕತ್ತು ಸೀಳಿ ಕೊಲೆ ಮಾಡಿದ ಘಟನೆ ತಾಲೂಕಿನ ಕೂಡಲಗಿ ಗ್ರಾಮದಲ್ಲಿ ನಡೆದಿದೆ.

ಕೂಡಲಗಿ ಗ್ರಾಮದ ಶರಣು ಈರಪ್ಪ ಕುಂಬಾರ(20) ಕೊಲೆಯಾದ ಯುವಕ.

ಬೆಂಗಳೂರಲ್ಲಿ ಇರುತ್ತಿದ್ದ ಯುವಕ ಗ್ರಾಮದಲ್ಲಿನ ಜಾತ್ರೆಗಾಗಿ ಬಂದಿದ್ದು. ಮನೆಯಲ್ಲಿರುವ ಯುವಕನಿಗೆ ಕರೆಯಿಸಿ ಮಾಚಗುಂಡಾಳ ಸಮೀಪದ ಆಂಜನೇಯ ಕ್ಯಾಂಪ್ ಬಳಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಬೆಂಗಳೂರಲ್ಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಯುವತಿ ಕಡೆಯವರು ಬೆಂಗಳೂರಿನಿಂದ ಬಂದು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಶವವನ್ನು ಸುರಪುರ ಆಸ್ಪತ್ರೆಯಲ್ಲಿರಿಸಲಾಗಿದ್ದು ಸುರಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹಬ್ಬ, ಜಾತ್ರೆ ಸಡಗರದಲ್ಲಿದ್ದ  ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published.