ಸುರಪುರ: ಮೂವತ್ತಕ್ಕೂ ಹೆಚ್ಚು ಜನರಲ್ಲಿ ಚಿಕನ್ ಗೂನ್ಯಾ ಜ್ವರ


ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಮೂವತ್ತಕ್ಕೂ ಹೆಚ್ಚು ಜನರಲ್ಲಿ ಚಿಕುಂಗುಣ್ಯ ಜ್ವರ ಕಾಣಿಸಿಕೊಂಡು ಪ್ರಕರಣ ವರದಿಯಾಗಿದೆ.

ಕಳೆದ ಒಂದು ವಾರದಿಂದ ಗ್ರಾಮದ ಅನೇಕರಲ್ಲಿ ಕೈಕಾಲುಗಳಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಜನರಲ್ಲಿ ಭೀತಿ ಉಂಟಾಗಿತ್ತು. ಇದನ್ನು ತಿಳಿದು ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ. ನಾಯಕ ಗ್ರಾಮಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಜನರಲ್ಲಿ ಚಿಕನ್ ಗುನ್ಯಾ ಇರುವ ಬಗ್ಗೆ ದೃಢಪಟ್ಟಿದ್ದು ಚಿಕಿತ್ಸೆಯನ್ನು ಆರಂಭಿಸಿದ್ದಾರೆ. ಗ್ರಾಮದಲ್ಲಿನ ಸ್ವಚ್ಛತೆ ಮತ್ತು ಸೊಳ್ಳೆಗಳ ಕಾಟದಿಂದ ಚಿಕನ್ ಗುನ್ಯಾ ಹರಡುವ ಸಾಧ್ಯತೆ ಇದೆ ಸ್ಥಳೀಯ ಪಂಚಾಯತಿಯಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

ಗ್ರಾಮದ ಇನ್ನೂ ಅನೇಕರಲ್ಲಿ ಈ ಜ್ವರ ಹರಡುವ ಮುಂಚೆ ನಿತ್ಯವೂ ಗ್ರಾಮಕ್ಕೆ ವೈದ್ಯರು ಬಂದು ಚಿಕಿತ್ಸೆ ನೀಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಮಾಸುಹ ಸಾಬ್ ತಿಂಥಣಿ ಆರೋಗ್ಯಾಧಿಕಾರಿ ಗಳಿಗೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ಸಹಾಯಕರಾದ ಶ್ರೀ ದೇವಿ ಶಿವರಾಜ್ ಮತ್ತು ಎಂ ಬಿ ಪಿ ಒ ವಿಶ್ವನಾಥ್ ಇದ್ದರು.

Leave a Reply

Your email address will not be published.