ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿದು ವ್ಯಕ್ತಿ ಕೈಗೆ ಗಂಭೀರ ಗಾಯ

ಪಟಾಕಿ ಸಿಡಿದು ಕೈಗೆ ಗಂಭೀರ ಗಾಯ ಮಾಡಿಕೊಂಡಿರುವ ಶಂಕರ್ ಹಸನಾಪುರ


ಸುರಪುರ: ದೀಪಾವಳಿ ಎಂದರೆ ಪಟಾಕಿ ಸಿಡಿಸಿ ಪರಿಸರ ಹಾಳು ಮಾಡಬೇಡಿ ಹಾಗೂ ಅವಘಡಕ್ಕೆ ಈಡಾಗದಂತೆ ಸರಕಾರಗಳು ಎಚ್ಚರಿಸಿದರು ಜನರು ಲೆಕ್ಕಿಸದೆ ಅನಾಹುತ ಮಾಡಿಕೊಳ್ಳುತ್ತಾರೆ.

ಸುರಪುರ ನಗರದ ಹಸನಾಪುರದ ನಿವಾಸಿ ಶಂಕರ್ ಗೋಲ್ಡ್ ಎಂಬುವವರು ಕಳೆದ ರಾತ್ರಿ ಮಳೆಯ ಪಟಾಕಿ ಕೈಯಲ್ಲಿ ಹಿಡಿದು ಹಚ್ಚಿದ ಪರಿಣಾಮ, ಪಟಾಕಿ ಸಿಡಿದು ಕೈಗೆ ಗಂಭೀರ ಗಾಯವಾದ ಘಟನೆ ನಡೆದಿದೆ.

ಗಾಯಗೊಂಡ ವ್ಯಕ್ತಿ ಶಂಕರ್ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published.