ಉಪ ಚುನಾವಣೆ ಗೆಲುವಿಗೆ ಸುರಪುರದಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ


ಸುರಪುರ: ರಾಜ್ಯದಲ್ಲಿ ನವೆಂಬರ್ 3ರಂದು ನಡೆದ ಐದು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಸುರಪುರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ರಾಜಾ ವಿಜಯ ಕುಮಾರ್ ನಾಯಕ್ ಮಾತನಾಡಿ ರಾಜ್ಯದಲ್ಲಿ ಸರಕಾರ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಆಡಳಿತವನ್ನು ಜನತೆ ಮೆಚ್ಚಿ ಎಲ್ಲಾ ಐದು ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಮತದಾರರು ಮೈತ್ರಿ ಪಕ್ಷಗಳ ಅಭ್ಯರ್ಥಿಗಳಿಗೆ 4 ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಂಬಲಿಸಿ ಗೆಲುವಿಗೆ ಕಾರಣೀಭೂತರಾದ ಜನರು ಸರಕಾರವನ್ನು ಮೆಚ್ಚಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಲು ಅನುವು ಮಾಡಿಕೊಟ್ಟಂತಾಗಿದೆ ಎಂದರು.

ಸಂಭ್ರಮಾಚರಣೆಯ ಆರಂಭದಲ್ಲಿ ಮಹಾತ್ಮಾಗಾಂಧಿ ಮೂರ್ತಿಗೆ ಮಾಲಾರ್ಪಣೆ ಮಾಡಿ,ನಂತರ ಪಟಾಕಿ ಸಿಡಿಸಿ ಸಿಹಿ ಹಂಚಿ ಮೈತ್ರಿ ಸರ್ಕಾರದ ಪರವಾಗಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ರಾಜಾ ವರದರಾಜ ನಾಯಕ್ ನಗರಸಭೆ ಸದಸ್ಯರಾದ ಮಹಮ್ಮದ್ ಶರೀಫ್, ಮಹಿಬೂಬ್ ಖುರೇಶಿ, ಮಾಜಿ ಸದಸ್ಯ ಮಾನಪ್ಪ ಫ್ಯಾಮಿಲಿ ಹಾಗೂ ಮುಖಂಡರುಗಳಾದ ನಿಂಗಣ್ಣ ಐಕೂರ,ಮಹ್ಮದ್ ಮೌಲಾ ಸೌದಾಗರ್, ಅಜ್ಮೀರ್ ಖುಷಿ, ಶರಣು ಕಲಬುರ್ಗಿ,ಉಸ್ಮಾನ್ ಸಾಬ್ ಖುರೇಷಿ, ವೆಂಕಟೇಶ್ ದಳವಾಯಿ ಸೇರಿದಂತೆ ಹಲವರಿದ್ದರು.

Leave a Reply

Your email address will not be published.