ರೈತರ ಸಾಲ ಮನ್ನಾ ಪ್ರಕ್ರಿಯೆ ಆರಂಭ: ಹೆಸರು ನೋಂದಣಿಗೆ ಡಿಸಿ ಬೊಮ್ಮನಹಳ್ಳಿ ಸೂಚನೆ


ಬೆಳಗಾವಿ: ರಾಜ್ಯ ಸರಕಾರ ವಾಣಿಜ್ಯ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾ ಮಾಡುವ ಉದ್ದೇಶದಿಂದ ತಂತ್ರಾಂಶವೊಂದನ್ನು ಸಿದ್ದ ಪಡಿಸಿದ್ದು,  ಸಾಲ ಪಡೆದ ರೈತರು ಡಿ. 31 ರೊಳಗೆ ವಾಣಿಜ್ಯ ಬ್ಯಾಂಕ್ ಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲ ಪಡೆದ ರೈತರು ವಾಣಿಜ್ಯ ಬ್ಯಾಂಕ್ ಗಳಿಗೆ ಆಗಮಿಸಿ  ಇಂದಿನಿಂದಲೇ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಆಧಾರ ಕಾರ್ಡ್, ರೇಷನ್ ಕಾರ್ಡ್ ನ ನಕಲು ಪ್ರತಿಗಳನ್ನು, ಸಾಲ ಪಡೆದ ಸರ್ವೆ ನಂಬರ್ ಮಾಹಿತಿ ತಗೆದುಕೊಂಡು ಹೋಗಬೇಕು ಎಂದರು.

ಒಂದು ಬ್ಯಾಂಕ್ ನಲ್ಲಿ ದಿನಕ್ಕೆ 30 ರಿಂದ 40 ಜನರ ಹೆಸರು ನೋಂದಣಿಗೆ ಅವಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿದರೆ ನಾಳೆ ದಿನದ ಟೋಕನ್ ನೀಡಲಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published.