ಕಾಂಗ್ರೆಸ್ ಹಿಂದುಳಿದ ವರ್ಗ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಗೀತಾ ಕದರಮಂಡಲಗಿ ನೇಮಕ


ದಾವಣಗೆರೆ: ಹರಿಹರ ನಗರದ ಗೀತಾ ಕದರಮಂಡಲಗಿ ಅವರನ್ನು  ಕಾಂಗ್ರೆಸ್  ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಹರಿಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ಗೀತಾ ಕದರಮಂಡಲಗಿ ಕಾರ್ಯ ನಿರ್ವಹಿಸಿದ್ದರು.

ಈ ಸಂದರ್ಭದಲ್ಲಿ  ದಾವಣಗೆರೆ ಜಿಲ್ಲಾ ಕಾಂಗ್ರೆಸ್  ಪರಿಶಿಷ್ಟ ಪಂಗಡಗಳ ವಿಭಾಗದ ಕಾರ್ಯದರ್ಶಿ ಮಾರುತಿ ದಾಸರ್, ಡಿ.ವೈ. ಇಂದಿರಾ, ಗುತ್ತಿಗೆದಾರರಾದ ಟಿ.ಆರ್. ಪ್ರಶಾಂತ್ ಇತರರು ಇದ್ದರು.

Leave a Reply

Your email address will not be published.