ಸಾಹಿತ್ಯಕ್ಕೆ ಬಾಲ್ಯದ ನೆನಪುಗಳು ಪ್ರೇರಕ-ಪ್ರೊ.ಕೆ.ಎಸ್.ನಾಯಕ


ಕಲಬುರಗಿ: ಸಾಹಿತ್ಯ ಬರವಣಿಗೆಗೆ ಬಾಲ್ಯದ ನೆನಪುಗಳು ಅಗಾಧ ಪ್ರೇರಕಶಕ್ತಿಯಾಗಿವೆ. ಇಂಗ್ಲೀಷ ಸಾಹಿತ್ಯ, ಕನ್ನಡ ಸಾಹಿತ್ಯಕ್ಕೆ ಪ್ರೇರಕ, ಪೂರಕವಾಗಿದೆ ಎಂದು ನಿವೃತ ಕನ್ನಡ ಪ್ರಾಧ್ಯಾಪಕ ಪ್ರೊ.ಕೆ.ಎಸ್.ನಾಯಕ ಅಭಿಪ್ರಾಯ ಪಟ್ಟರು.

ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಇಂದು ಹಮ್ಮಿಕೊಂಡಿದ್ದ ‘ಸಣ್ಣ ಕಥೆ ಕಟ್ಟುವ ಕೌಶಲ್ಯ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಾಹಿತ್ಯ ಬರವಣಿಗೆಗೆ ವಿಶಾಲ ಓದಿನ ಅನುಭವವಿರಬೇಕು ಎಂದು ತಿಳಿಸಿದ್ದರು.

ಡಾ. ಶಿವರಾಜ ಶಾಸ್ತ್ರಿ ಪರಿಚಯಿಸಿದರು. ಪ್ರೊ. ನಾನಾ ಸಾಹೇಬ್ ನಿರೂಪಿಸಿದರು. ಡಾ ಸುಮಂಗಲಾ ರೆಡ್ಡಿ ಸ್ವಾಗತಿಸಿದರು. ಡಾ. ಪ್ರಭಾವತಿ ಚಿತ್ತಕೋಟಿ ವಂದಿಸಿದರು. ಡಾ. ಎಂ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದರು. ಡಾ. ನೀಲಾಂಬಿಕಾ ಶೇರಿಕಾರ, ಡಾ ಸಾರೀಕಾದೇವಿ ಕಾಳಗಿ ಮತ್ತಿತ್ತರರು ಉಪಸ್ಥಿತರಿದ್ದರು.
ಕಾರ್ಯಗಾರ -ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಡಿ.14, 15, 16 ಮತ್ತು 21 ರಂದು ನಾಲ್ಕು ದಿನ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.

ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮಹಾದೇವ ಬಡಿಗೇರ ಡಿ.14 ರಂದು ಹಾಗೂ ಕೇಂದ್ರಿಯ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ಡಾ. ವಿಕ್ರಮ ವಿಸಾಜಿ ಡಿ.15 ರಂದು ‘ಪ್ರಬಂಧ ರಚನಾ ಕೌಶಲ್ಯ ಕುರಿತು ಮಾತನಾಡಲಿದ್ದಾರೆ.
ಡಿ.16ರಂದು ಶರಣಬಸವ ಕಲಾ ಮಹಾವಿದ್ಯಾಲಯದ ಪ್ರೊ. ವೆಂಕಣ್ಣಾ ಡೊಣ್ಣೆಗೌಡರ ‘ಲಿಂಗ-ವಚನ ಮತ್ತು ವಿಭಕ್ತಿ ಪ್ರತ್ಯಯ’ ಕುರಿತು ಮಾತನಾಡಲಿದ್ದಾರೆ. ಡಿ.21 ರಂದು ವ್ಹಿ.ಜಿ. ಮಹಿಳಾ ಮಹಾ ವಿದ್ಯಾಲಯದ ಕನ್ನಡ ಉಪಾನ್ಯಾಸಕರಾದ ಡಾ. ಈಶ್ವರಯ್ಯ ಮಠ ‘ಕನ್ನಡ ತತ್ವಪದ ಸಾಹಿತ್ಯ’ ಕುರಿತು ವಿಚಾರ ಮಂಡಿಸಲಿದ್ದಾರೆ ಎಂದು ಶರಣಬಸವ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎಸ್.ಪಾಟೀಲ ತಿಳಿಸಿದ್ದಾರೆ.

Leave a Reply

Your email address will not be published.