ಬಾಬ್ರಿ ಮಸೀದಿ ಧ್ವಂಸ: ಕಲಬುರಗಿಯಲ್ಲಿ ಮುಸ್ಲಿಂರಿಂದ ಕರಾಳ ದಿನಾಚರಣೆ


ಕಲಬುರಗಿ: ಬಾಬ್ರಿ ಮಸೀದಿ ಧ್ವಂಸ ಮಾಡಿದ ಸ್ಥಳದಲ್ಲೇ ಪುನರ್ ಮಸೀದಿ ನಿರ್ಮಾಣ ಮಾಡಬೇಕು ಮತ್ತು ಬಾಬ್ರಿ ಮಸೀದಿ ಧ್ವಂಸ ಮಾಡಿದವರಿಗೆ ಭಾರತದ ಸಂವಿಧಾನದ ಅಡಿಯಲ್ಲಿ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಇಂದು ಮುಸ್ಲಿಂ ಬಾಂಧವರು ಕರಾಳ ದಿನಾಚರಣೆ ಆಚರಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಮುಸ್ಲಿಂ ಬಾಂಧವರು ಕರಾಳ ದಿನಾಚಣೆಯ ನಾಮಫಲಕ ಹಿಡಿದು ಬಾಬ್ರಿ ಮಸೀದಿ ನಿರ್ಮಾಣಕ್ಕೆ ಆಗ್ರಹಿಸಿದರು.

ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕೇಂದ್ರ ರ್ಕಾರದ ತರತಮ ಧೋರಣೆಯನ್ನು ಖಂಡಿಸಿದರು.

ಶಬ್ಬೀರ್ ಅಹ್ಮದ್, ಎಂ.ಡಿ.ವಿ. ಅಲಿ, ಮೊಹ್ಮದ್ ಇಮ್ರಾನ್, ಅಬ್ದುಲ್ ರಜಾಕ್ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ಹೈದರಾಬಾದ್ ಕರ್ನಾಟಕ ಪಟೇಲ್ ಮಂಚ್ ವತಿಯಿಂದ ಪ್ರತಿಭಟನೆ ನಡೆಸಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಒತ್ತಾಯಿಸಲಾಯಿತು.

ಯುನೂಸ್ ಪಟೇಲ್, ಮೋದಿನ್ ಪಟೇಲ್, ರುಕುಮ್ ಪಟೇಲ್ ಇತರರು ಭಾಗವಹಿಸಿದ್ದರು.

Leave a Reply

Your email address will not be published.