ಕಲಬುರಗಿ: ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ


ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಿ.ಅರ್. ಅಂಬೇಡ್ಕರ್ ಅವರು ಜಗತ್ತು ಕಂಡ ಮಹಾನ್ ಮುತ್ಸದ್ದಿ ಎಂದು ಜಿಲ್ಲಾಧಿಕಾರಿ ಕೆ. ವೆಂಕಟೇಶ ಹೇಳಿದರು.

ನಗರದ ಜಗತ್ ವೃತ್ತದ ಬಳಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಎಸ್.ಸಿ, ಎಸ್ಟಿ ನೌಕರರ ಸಂಘ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಂದು ಜರುಗಿದ ಅಂಬೇಡ್ಕರ್ ಮಹಾಪರಿನಿರ್ವಾಹಣ ದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಅಂಬೇಡ್ಕರ್ ಜೀವನ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಗಾನಂದ ಭಂತೆ ಸಾನ್ನಿಧ್ಯ  ವಹಿಸಿದ್ದರು.ಎಸ್ಪಿ ಎನ್. ಶಶಿಕುಮಾರ, ಮಹಾನಗರ ಪಾಲಿಕೆ ಮೇಯರ್ ಮಲ್ಲಮ್ಮ ವಳಕೇರಿ, ವಿಜಯಕುಮಾರ ಸಾಲಿಮನಿ ವೇದಿಕೆಯಲ್ಲಿದ್ದರು. ಸಂಜೀವಕುಮಾರ ಕಾಂಬ್ಳೆ ಇತರರಿದ್ದರು.

Leave a Reply

Your email address will not be published.