ಹೋಟೆಲ್ ಮಾಲೀಕನಿಗೆ ತಲ್ವಾರ್ ನಿಂದ ಇರಿತ: ಕಲಬುರಗಿಯಲ್ಲಿ ಮತ್ತೆ ಅಟ್ಟಹಾಸ ಮೆರೆದ ದರೋಡೆಕೋರರು


ದರೋಡೆಕೋರರಿಗೆ ದಾಲ್ ಮಿಲ್ ಗಳೇ ಟಾರ್ಗೆಟ್ !

ಪಿಸ್ತೂಲ್ ತೋರಿಸಿ ಹಣ, ಮಹಿಳೆಯ ಮಾಂಗಲ್ಯ ಸರ ಎಗರಿಸಿದ ಖತರ್ನಾಕ್ ಗ್ಯಾಂಗ್

ಕಲಬುರಗಿ: ನಗರದ ದಾಲ್ ಮಿಲ್ ಗಳಲ್ಲಿ ದರೋಡೆಕೋರರ ಪುಂಡಾಟ ಮತ್ತೆ ಮುಂದುವರೆದಿದೆ, ಸೇಡಂ‌ ರಸ್ತೆಯಲ್ಲಿರುವ ಬಸವೇಶ್ವರ ಖಾದಿ ಗ್ರಾಮೋದ್ಯೋಗ ದಾಲ್ ಮಿಲ್ ನಲ್ಲಿ ಆರು ಜನ ದರೋಡೆಕೋರರ ಅಟ್ಚಹಾಸ ಮೆರೆದಿದ್ದಾರೆ.

ರಾತ್ರಿ ಎರಡು ಗಂಟೆ ಸಮಯಕ್ಕೆ ದಾಲ್ ಮಿಲ್ ಗೆ ಬಂದಿರುವ ದರೋಡೆಕೋರರ ತಂಡ ದಾಲ್ ಮಿಲ್ ಕಚೇರಿಯ ಬಾಗಿಲು ಮುರಿದು ಒಳ ನುಗ್ಗಿದ್ದಾರೆ. ಆದ್ರೆ ಅಲ್ಲಿ ಹೆಚ್ಚು ಹಣ ಸಿಗದಿದ್ದಾಗ ಸಿಸಿಟಿವಿ ಡಿವಿಆರ್ ನ್ನು ಕತ್ತರಿಸಿ ತಗೆದುಕೊಂಡಿದ್ದಾರೆ. ನಂತರ ದಾಲ್ ಮಿಲ್ ಆವರಣದಲ್ಲಿರುವ ಹೋಟೆಲ್ ಗೆ ಹೋಗಿದ್ದಾರೆ.

ಹೋಟೆಲ್ ಮಾಲೀಕ ಗುರಬಸಯ್ಯಸ್ವಾಮಿ ಎಂಬುವವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ  ಹದಿನೈದು ಸಾವಿರ ನಗದು ತಗೆದುಕೊಂಡಿರುವ ದುರುಳರು ನಂತರ ಬಂದೂಕು‌ ತೋರಿಸಿ ಮಹಿಳೆಯರ ಕತ್ತಲ್ಲಿದ್ದ ಚಿನ್ನದ ತಾಳಿಯನ್ನು ಎಗರಿಸಿ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಹೋಟೆಲ್ ಮಾಲೀಕನನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇಲಿಂದ ಮೇಲೆ ದಾಲ್ ಮಿಲ್ ನಲ್ಲಿ ಕಳ್ಳತನ ಮತ್ತು ದರೋಡೆಗಳು ಹೆಚ್ಚಾಗುತ್ತಿರುವದರಿಂದ ದಾಲ್ ಮಿಲ್ ಮಾಲೀಕರು ಹೈರಣಾಗಿ ಹೋಗಿದ್ದಾರೆ.

Leave a Reply

Your email address will not be published.