ಶರಣಪ್ಪ ಬಾಚಲಾಪೂರಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ


ಕೊಪ್ಪಳ : ಜಿಲ್ಲೆಯ ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪೂರ ಅವರಿಗೆ ಕರ್ನಾಟಕ ಪತ್ರಿಕಾ ಅಕಾಡೆಮಿ ಕೊಡಮಾಡುವ 2018 ರ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಜಿಲ್ಲೆಯ ಪತ್ರಕರ್ತರು ಸೇರಿದಂತೆ ಜನತೆಯ ಸಂತಷ ವ್ಯಕ್ತಪಡಿಸಿದ್ದಾರೆ.
ರಾಯಚೂರಿನ ಸುದ್ದಿಮೂಲ ಪತ್ರಿಕೆಯಲ್ಲಿ ಆಗಿನ ಅಖಂಡ ರಾಯಚೂರು ಜಿಲ್ಲೆಯ ಕುಷ್ಟಗಿ ತಾಲೂಕಾ ವರದಿಗಾರನಾಗಿ (ರಾಯಚೂರು-ಕೊಪ್ಪಳ) 1996 ರಿಂದ ವೃತ್ತಿ ಆರಂಭಿಸಿದ ಶರಣಪ್ಪ ಬಾಚಲಾಪೂರ ಮೂಲತಃ ಹನುಮಸಾಗರ ಗ್ರಾಮದವರು. ಹುಟ್ಟು ಹೋರಾಟಗಾರರಾದ ಇವರು, ಕಾಲೇಜು ಜಿವನದಲ್ಲಿಯೇ ಎಸ್ಎಫ್ಐ ಯಂತಹ ಸಂಘಟನೆಗಳಲ್ಲಿ ಗುರುತಿಸಿಕೊಂಡು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಕೈಗೊಂಡವರು.

ಪತ್ರಿಕಾ ವೃತ್ತಿವೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರುಮಾಡಿದ ಇವರು ರಂಗಭೂಮಿ ಕಲಾವಿದರು. ನಾಡಿನ ಹೆಸರಾಂತ ನಾಟಕ ರಚನಾಕಾರ ಪಿ.ಬಿ.ದುತ್ತರಗಿ ಹಾಗೂ ಕಲಾವಿದೆ ಸರೋಜಮ್ಮ ದಂಪತಿಗಳೊಂದಿಗೆ ಬಹಳಷ್ಟು ನಿಕಟ ಸಂಬಂಧ ಹೊಂದಿದ ಇವರು ದುತ್ತರಗಿಯವರು ರಚಿಸಿದ ಸಂಪತ್ತಿಗೆ ಸವಾಲ, ಹಸಿರು ಬಳೆ, ಮಲಮಗಳು ಇತ್ಯಾದಿ ನಾಟಕಗಳಲ್ಲಿನ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ ಒಬ್ಬ ಅಪ್ಪಟ ಗ್ರಾಮೀಣ ರಂಗಭೂಮಿ ಕಲಾವಿದರು.

ಕಾಲೇಜು ದಿನಗಳ ಬಳಿಕ ಹನುಮಸಾಗರದಲ್ಲಿ ಯುವಕರ ಗುಂಪು ಕಟ್ಟಿಕೊಂಡು ಗ್ರಾಮದಲ್ಲಿ ಹಲವು ನಾಟಕಗಳ ಪ್ರದರ್ಶನಗಳಿಗೆ ಕಾರಣರಾದವರು. ಬಳಿಕ, 2000 ನೇ ಇಸ್ವಿಯಲ್ಲಿ ಆರಂಭವಾದ ಆಂದ್ರ ಮೂಲದ ‘ಈ ಟಿವಿ ಕನ್ನಡ’ ಕೊಪ್ಪಳ ಜಿಲ್ಲಾ ವರದಿಗಾರರಾಗಿ ನೇಮಕಗೊಂಡು 2016 ರವರೆಗೆ ಕೊಪ್ಪಳದಲ್ಲಿ ಬಹಳಷ್ಟು ನಿಷ್ಟೆ ಹಾಗೂ ಪ್ರಮಾಣಿಕವಾಗಿ ಸೇವೆಸಲ್ಲಿಸಿದ ಇವರು ಈ ಟಿವಿ ಮಾಲಿಕತ್ವ ಬದಲಾವಣೆಯಿಂದ ‘ನ್ಯೂಸ್ 18 ಕನ್ನಡ’ ವಾಗಿ ಬದಲಾದ ಮೇಲೆ ಇವರು ಪದನ್ನೊತ್ತಿಯಿಂದ ರಾಯಚೂರಿನಲ್ಲಿ ಕಾರ್ಯನಿರ್ವವಹಿಸುತ್ತಿದ್ದಾರೆ.

ಕೆಲಸದಲ್ಲಿ ಯಾರೊಂದಿಗೆ ರಾಜಿಯಿಲ್ಲದಿರುವುದು ಇವರ ಮುಖ್ಯ ಗುಣಗಳಲ್ಲೊಂದು. ಈಟಿವಿ ಕನ್ನಡ ಆರಂಭವಾದಾಗಿನಿಂದ ಇಲ್ಲಿಯವರೆಗೆ ಇದೆ ಒಂದೇ ಸಂಸ್ಥೆಯಲ್ಲಿ ಕೆಲಸ ನಿರ್ವವಹಿಸುತ್ತಿರುವುದು ಇವರದು ವಿಶೇಷ.

Leave a Reply

Your email address will not be published.