ಯಲಬುರ್ಗಾ ಪಿಕಾರ್ಡ ಬ್ಯಾಂಕ್ ನಲ್ಲಿ ರೂ. 26 ಲಕ್ಷ ದುರುಪಯೋಗ!


*ತಪ್ಪಿತಸ್ಥರ ವಿರುದ್ಧ ಸಿವಿಲ್. ಕ್ರಿಮಿನಲ್ ಪ್ರಕರಣ ದಾಖಲೆಗೆ ಸೂಚನೆ

ಕೊಪ್ಪಳ : ಜಿಲ್ಲೆಯ ಯಲಬುರ್ಬಾ ಪಿಕಾರ್ಡ್ ಬ್ಯಾಂಕ್ನಲ್ಲಾದ 25,99,663 ರೂಪಾಯಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸಿವಿಲ್. ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಹಕಾರ ಇಲಾಖೆಯ ಜಿಲ್ಲಾ ಉಪನಿಬಂಧಕರಿಗೆ ಬೆಂಗಳೂರಿನ ಸಾಮಾನ್ಯ ಶ್ರೇಣಿ ಸಮಿತಿಯ ಸದಸ್ಯ ಕಾರ್ಯದರ್ಶಿ ಸೂಚನೆ ನೀಡಿ ಪತ್ರ ಬರೆದಿದ್ದಾರೆ.

ಬ್ಯಾಂಕಿನಲ್ಲಿ ಆಗಿರವ ಅವ್ಯವಹಾರದ ಬಗ್ಗೆ ಬಗ್ಗೆ ಮಾಹಿತಿ ಪಡೆದಿದ್ದ ಕೇಂದ್ರ ಬ್ಯಾಂಕ್ನವರು ಈ ಕೂಡಲೇ ತಪ್ಪಿತಸ್ಥ ಪ್ರಭಾರ ಮ್ಯಾನೆಜರ್ ಎ.ಎಸ್. ಕೆಲಗೇರಿ, ನಿವೃತ್ತ ಮ್ಯಾನೆಜರ್ ಪಿ.ಕೆ. ದುಮ್ಮಾಳ ಹಾಗೂ ಇವರು ಮಾಡಿದ ಅವ್ಯವಹಾರಕ್ಕೆ ಪರೋಕ್ಷ ಸಹಕಾರ ನೀಡಿದ ಆಡಳಿತ ಮಂಡಳಿ ವಿರುದ್ಧ ಸಿವಿಲ್, ಕ್ರಿಮಿನಲ್ ಹಾಗೂ ಸಹಕಾರ ಕಾಯ್ದೆ 1959ರ ಪ್ರಕಾರ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಕೊಪ್ಪಳ ಜಿಲ್ಲಾ ಸಹಕಾರ ಇಲಾಖೆಯ ಉಪನಿಬಂಧಕರಿಗೆ ದಿನಾಂಕ : 14.11.2018ರಂದು ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.

ಎ.ಎಸ್. ಕೆಲಗೇರಿ ಹಾಗೂ ನಿವೃತ್ತ ಮ್ಯಾನೆಜರ್ ಪಿ.ಕೆ. ದುಮ್ಮಾಳ ಇಬ್ಬರೂ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುವ ವೇಳೆ ಬ್ಯಾಂಕಿನ ನಗದು ಪುಸ್ತಕವನ್ನು 30-4-2018ರ ವರೆಗೆ ಮಾತ್ರ ಬರೆದಿದ್ದು, 1-5-2018ರಿಂದ ಇಲ್ಲಿಯವರೆಗೆ ನಗು ಪುಸ್ತಕ ಬರೆಯದೇ ಬಾಕಿ ಉಳಿಸಿಕೊಂಡು, 30-4-2018ರ ಅಂತ್ಯಕ್ಕೆ ಇದ್ದ 14.50 ಲಕ್ಷ ಹಣವನ್ನು ಶಾಖಾ ಕಚೇರಿಗೆ ವರ್ಗಾವಣೆ ಮಾಡದೇ ದುರುಪಯೋಗಪರಿಸಿಕೊಂಡಿದ್ದು ಮತ್ತು 9-10-18ರಿಂದ 12-10-18ರ ವರೆಗೆ ವಾರ್ಷಿಕ ಲೆಕ್ಕ ತಪಾಸಣೆ ವೇಳೆಯಲ್ಲಿ ಬ್ಯಾಂಕಿನ ಜಮಾ ಖರ್ಚಿನ ವ್ಯವಹಾರಗಳನ್ನು ಪರಿಶೀಲಿಸಿದಾಗ ಒಟ್ಟು 25,99,663 ಹಣ ದುರುಪಯೋಗವಾಗಿದೆ ಎಂದು ಉಲ್ಲೇಖಿತ ಪತ್ರಗಳೊಂದಿಗೆ ಜಿಲ್ಲಾ ವ್ಯವಸ್ಥಾಕರು ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನಾಧರಿಸಿ ಬ್ಯಾಂಕಿನ ಆಡಳಿತ ಮಂಡಳಿಯವರು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಆಡಳಿತ ಮಂಡಳಿ ಸಹ ಇದಕ್ಕೆ ಪ್ರೋತ್ಸಾಹ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದಿದ್ದರೆ

*ಈ ಪ್ರಕರಣದ ಕುರಿತು ಈಗಾಗಲೆ ಪ್ರಭಾರಿ ಮ್ಯಾನೆಜರ್ ಆಗಿದ್ದ ಎ.ಎಸ್. ಕೆಲಗೇರಿಯವರನ್ನು ಅಮಾನತು ಮಾಡಲಾಗಿದೆ. ಈ ಕೂಡಲೇ ನೀವು ಬ್ಯಾಂಕಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಪಿ.ಕೆ. ದುಮ್ಮಾಳ ವಿರುದ್ಧ ಸಿವಿಲ್, ಕ್ರಿಮಿನಲ್ ಕೇಸ್ ದಾಖಲಿಸಿ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ವಿರುದ್ಧ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರಂತೆ ಸೂಕ್ತ ಕಾನೂನು ಕ್ರಮ ಜರುಗಿಸಿ, ತೆಗೆದುಕೊಂಡ ಕ್ರಮದ ಬಗ್ಗೆ ಶಿಘ್ರವೇ ವರದಿ ಮಾಡಿ ಎಂದು ನ. 14ರಂದು ಆದೇಶ ಮಾಡಿ ಪತ್ರ ಬರೆದಿದ್ದಾರೆ.

ಜಿಲ್ಲಾ ಕಚೇರಿಯಲ್ಲಿ ಗಲಾಟೆ?ಪಿಕಾರ್ಡ್ ಬ್ಯಾಂಕಿನಲ್ಲಾದ ಅವ್ಯವಹಾರದ ಕುರಿತು ಆಡಳಿತ ಮಂಡಳಿ ಇದೀಗ ಕೆಲ ದಾಖಲೆಗಳಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿಯ ದುಂಬಾಲು ಬಿದಿದ್ದೆ. ನ. 30ರಂದು ಸಂಜೆ ಕಚೇರಿ ಅವಧಿ ಮುಗಿದ ಬಳಿಕ ಮೂರ್ನಾಲ್ಕು ಜನರನ್ನು ಕಟ್ಟಿಕೊಂಡು ಅಲ್ಲಿನ ಸಿಬ್ಬಂದಿ ಜೊತೆ ರಾತ್ರಿ ಹೊತ್ತಲು ಇದ್ದಿರುವ ವಿಷಯ ತಿಳಿದ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪಿಕಾರ್ಡ ಅಧ್ಯಕ್ಷರು ಹಾಗೂ ಸಿಬ್ಬಂದಿಗಳನ್ನು ಅಲ್ಲಿಂದ ತೆರುವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published.