ಸಮಾಜದಲ್ಲಿ ಬೇಧ ಬೇಡ ಸಮಾನವಾಗಿ ಬದುಕು ಹಕ್ಕು ಇದೆ : ಟಿ. ಶ್ರೀನಿವಾಸ್


ಕೊಪ್ಪಳ :ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕು ಕಾನೂನಿನಲ್ಲಿದ್ದು, ಯಾವುದೇ ತರಹದ ಖಾಯಿಲೆಗೊಳಗಾದವರಿಗೆ ಬೇಧ ಬೇಡ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ್ ಅವರು ಹೇಳಿದರು.

“ವಿಶ್ವ ಏಡ್ಸ್ ದಿನ” ಅಂಗವಾಗಿ ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತ್ತಕೋತ್ತರ ಕೇಂದ್ರದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕು ಕಾನೂನಿನಲ್ಲಿದೆ. ಯಾವುದೇ ಖಾಯಿಲೆ ಬಂದರು ಸಾರ್ವಜನಿಕರು ಪ್ರತಿಯೊಬ್ಬರನ್ನು ಸಮಾನವಾಗಿ ಕಾಣಬೇಕೆಂದರು.

ಏಕಸಂಗಾತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಿರ್ಭಯವಾಗಿ ಜೀವನ ನಡೆಸಬಹುದು. ಅಗ್ಗದ ದರದಲ್ಲಿ ದೊರೆಯುವ ಇಂಟರ್‌ನೆಟ್ ಅನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬೇಕು. 2018ರ ನಿಮ್ಮ ಹೆಚ್.ಐ.ವಿ. ಸ್ಥಿತಿಯನ್ನು ತಿಳಿಯಿರಿ ಘೋಷವಾಕ್ಯದಂತೆ ಎಲ್ಲರೂ ತಮ್ಮ ತಮ್ಮ ಹೆಚ್.ಐ.ವಿ. ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ್ ಅವರು ಹೇಳಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಬಿ. ಜಂಬಯ್ಯ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯ ಹೆಚ್.ಐ.ವಿ./ ಏಡ್ಸ್ ಪ್ರತಿವರ್ಷವು ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಜಿಲ್ಲೆಯಲ್ಲಿ 14 ಐಸಿಟಿಸಿ ಪರೀಕ್ಷಾ ಕೇಂದ್ರಗಳು, 2 ಎ.ಆರ್.ಟಿ. ಕೇಂದ್ರಗಳು, 2 ಡಿ.ಎಸ್.ಆರ್.ಸಿ., 2 ಬ್ಲಡ್‌ಬ್ಯಾಂಕ್ ಹಾಗೂ 4 ಸ್ವಯಂಸೇವಾ ಸಂಸ್ಥೆಗಳು ಉತ್ತಮವಾಗಿ ಸೇವೆಯನ್ನು ಮಾಡುತ್ತಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ವಿ.ಸ್ನಾತ್ತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ. ಮನೋಜ್ ಡೊಳ್ಳಿ ಅವರು ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿರೂಪಾಕ್ಷರೆಡ್ಡಿ ಮಾದಿನೂರು, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಎಸ್.ಕೆ.ದೇಸಾಯಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ, ಸ.ಪ್ರ.ದ. ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಶೋಭಾ ಸೇರಿದಂತೆ ಅನೇಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.