ಗೋವಾ – ಗುಂತಕಲ್ ಮಧ್ಯೆ ವಿದ್ಯುತ್ ಚಾಲಿತ ರೈಲು


ಗುಂತಕಲ್ ದಿಂದ ಕೊಪ್ಪಳದವರೆಗೆ ವಿದ್ಯುತ್ ರೈಲು ಮಾರ್ಗ ಮುಕ್ತಾಯ ಹಂತದಲ್ಲಿ 

2013-14ನೇ ಸಾಲಿನ ಯೋಜನೆಗೆ ೪೮೦ ಕಿ.ಮೀ. ಉದ್ದದ ಮಾರ್ಗಕ್ಕೆ ರೂ. 750 ಕೋಟಿ ಅನುದಾನ

ಕೊಪ್ಪಳ : ಹೈದ್ರಾಬಾದ್-ಕರ್ನಾಟಕ ಹಾಗೂ ಮುಂಬಾಯಿ ಕರ್ನಾಟಕ ಪ್ರದೇಶದ ಆಂಧ್ರ, ಕರ್ನಾಟಕ ಮತ್ತು ಗೋವಾ ರಾಜ್ಯದ ನೇರ ಸಂಪರ್ಕಕದ ಬಹು ನಿರೀಕ್ಷಿತ ಗೋವಾ ಮತ್ತು ಗುಂತಕಲ್ ಮಧ್ಯೆ ವಿದ್ಯುತ್ ಚಾಲಿತ ರೈಲು ಓಡಿಸಲು ರೈಲ್ವೆ ಇಲಾಖೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಿದೆ.

ಗೋವಾದ ವಾಸ್ಕೋ-ಡ-ಗಾಮಾ ರೈಲು ನಿಲ್ದಾಣದಿಂದ ಆಂಧ್ರ ಪ್ರದೇಶದ ಗುಂತಕಲ್ ವರೆಗೆ ಜೋಡಿ ರೈಲು ಹಳಿ ಜೋಡಣೆ ಕಾಮಗಾರಿ ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಪ್ರಸ್ತುತ ಇದೇ ಲೈನ್‌ನಲ್ಲಿ ಗುಂತಕಲ್ ನಿಂದ ವಿದ್ಯುತ್ ರೈಲು ಚಲಿಸುತ್ತಿದ್ದು, ಬಳ್ಳಾರಿಯಿಂದ ಈ ಕಾಮಗಾರಿಗೆ ಕೇಂದ್ರ ಸರ್ಕಾರ ಯೋಜನೆಯನ್ನು ರೂಪಿಸಿ ಅನುದಾನವನ್ನು ಮಂಜೂರು ಮಾಡಿರುತ್ತದೆ.

ಬಳ್ಳಾರಿ-ಹೊಸಪೇಟೆ ಕಾಮಗಾರಿ ಇವಾಗ ಅಂತಿಮ ಹಂತದಲ್ಲಿದ್ದು, ಹೊಸಪೇಟೆ ಯಿಂದ ಕೊಪ್ಪಳದವರೆಗೆ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುತ್ತಿದ್ದು, ಜನವರಿಗೆ ಕಾಮಗಾರಿ ಮುಕ್ತಾಯವಾದರೆ ಎಪ್ರೀಲ್ ನಿಂದ ಗುಂತಕಲ್ ದಿಂದ ಕೊಪ್ಪಳದವರೆಗೆ ನೇರವಾಗಿ ವಿದ್ಯುತ್ ರೈಲು ಓಡಬಹದು ಎಂದು ನಿರೀಕ್ಷಿಸಲಾಗಿದ್ದು, ಕೊಪ್ಪಳದಿಂದ ಹುಬ್ಬಳ್ಳಿ ವರೆಗೆ ವಿದ್ಯುತ್ ಕಂಬ ಅಳವಡಿಕೆಗೆ ರೈಲ್ವೆ ಇಲಾಖೆ ಸಾಮಾಗ್ರಿಗಳನ್ನು ಜಮಾವಣೆ ಮಾಡುತ್ತಿದೆ,.

ಈ ಎಲ್ಲ ಕಾಮಗಾರಿಯು ಮೂರು ವರ್ಷದ ಒಳಗಾಗಿ ಪೂರ್ಣಗೊಳ್ಳಲಿವೆ ಎಂದು ಹೇಳಲಾಗಿದ್ದು, ಬರುವ ವರ್ಷದೊಳಗಾಗಿ ಹುಬ್ಬಳ್ಳಿವರೆಗೆ ಕಾಮಗಾರಿ ಮುಗಿಯಲಿದ್ದು, ಅಲ್ಲಿಂದ ದಿನನಿತ್ಯ ಓಡಾಡುವ ರೈಲುಗಳಿಂದ ಹೆಚ್ಚು ಅನುಕೂಲವಾಗಲಿದೆ. 2013-14ನೇ ಸಾಲಿನಲ್ಲಿ ಒಟ್ಟು 480 ಕಿ.ಮೀ. ಉದ್ದದ ಹಳಿಗುಂಟ ರೂ. 750 ಕೋಟಿ ವೆಚ್ಚದ ಈ ಯೋಜನೆಗೆ ಕೇಂದ್ರ ಸರ್ಕಾರ ಅಂದು ಚಾಲನೆಯನ್ನು ನೀಡಿತ್ತು.

Leave a Reply

Your email address will not be published.