ಸಂಸದ ಸಂಗಣ್ಣ ಕರಡಿ ಸುಳ್ಳು ಹೇಳಿದ್ದು ಹೆಚ್ಚು ಕ್ಷೇತ್ರಕ್ಕೆ ಕೊಡುಗೆ ಶೂನ್ಯ: ಶಿವರಾಜ ತಂಗಡಗಿ ಆರೋಪ


ಕೊಪ್ಪಳ : ಸಂಸದ ಸಂಗಣ್ಣ ಕರಡಿ ಕೊಪ್ಪಳ ಲೋಕಸಭಾ  ಕ್ಷೇತ್ರಕ್ಕೆ ವಿಶೇಷವಾದ ಯಾವ ಯೋಜನೆಯನ್ನು ತರಲಾಗಲಿಲ್ಲ, ಬರಿ ಸುಳ್ಳು ಹೇಳುವದರಲ್ಲಿಯೇ ಅವರು ಐದು ವರ್ಷ ಕಳೆದಿರುವ ಅವರನ್ನು ಈ ಸಾರಿ ಮನೆಗೆ ಇಲ್ಲ ಕಾಡಿಗೆ ಕಳಿಸುವುದು ಮಾತ್ರ ಗ್ಯಾರೆಂಟಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯವರು ಹೇಗೆ ಸುಳ್ಳು ಹೇಳಿ ಜನರನ್ನು ನಂಬಿಸಿದಂತೆ ಸಂಸದ ಸಂಗಣ್ಣ ಕೂಡ ಯಾವ ಹೇಳಿಕೊಳ್ಳುವಂತಹ ಕಾರ್ಯಕ್ರಮವನ್ನು ಮಾಡಿಲ್ಲ, ಮತ್ತು ಅದು ಅವರಿಂದ ಆಗಲಿಲ್ಲ ಹೀಗಾಗಿ ಕೇಂದ್ರದ ಹಲವಾರು ಯೋಜನೆಗಳು ಕ್ಷೇತ್ರಕ್ಕೆ ಮಂಜೂರಿಯಾಗಿಲ್ಲವೆಂದು ದೂರಿದರು.

ಅದಕ್ಕಾಗಿ ಈ ಸಾರಿ ಅವರನ್ನು ಮನೆಗೆ ಇಲ್ಲಾ ಕಾಡಿಗೆ ಕಳುಹಿಸುವುದು ಮಾತ್ರ ಸಿದ್ಧ, ಕ್ಷೇತ್ರದಲ್ಲಿ ಕಾಂಗ್ರೆಸ್ ಮೊದಲುನಿಂದಲೂ ಬಲಿಷ್ಠವಾಗಿದ್ದು, ಚುನಾವಣೆ ಪೂರ್ವದಲ್ಲಿ ಈಗಾಗಲೇ ಕಾರ್ಯಕರ್ತರ ಮತ್ತು ಪಕ್ಷದ ಮಧ್ಯೆ ನೇರ ಸಂಪರ್ಕಕ್ಕೆ ಶಕ್ತಿ ಯೋಜನೆಯನ್ನು ಸದಸ್ಯತ್ವ ನೋಂದಣೆ ಮೂಲಕ ಮುಖ್ಯವಾಹಿನಿಗೆ ತರಲಾಗುತ್ತಿದ್ದು, ಸೋಮವಾರದಂದು ಕೊಪ್ಪಳದಲ್ಲಿ ಪಕ್ಷದ ಪ್ರಮುಖರಿಗಾಗಿ ಕಾರ್ಯಾಗಾರವನ್ನು ಏರ್ಪಡಿಸಿದೆ ಎಂದರು.

ಡಿ. ೧೦ಕ್ಕೆ ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಆಗಮನ : ನಗರದಲ್ಲಿ ಹಮ್ಮಿಕೊಂಡಿರುವ ಶಕ್ತಿ ಕಾರ್ಯಕ್ರಮ, ಸಂಘಟನಾ ಗೋಷ್ಠಿ, ಹಾಗೂ ಲೀಕಸಭಾ ಚುನಾವಣೆ ತಯಾರಿ ಕುರಿತಂತೆ ನಡೆಯುವ ಕಾರ್ಯಾಗಾರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗಮಿಸಲಿದ್ದಾರೆಂದು ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದರು.

ಬಿ.ಎಲ್.ಶಂಕರ್, ಶ್ರೀಧರ್ ಕಲ್ ವೀರ್, ಸುರಜ್ ಹೆಗಡೆಯವರು ಕಾರ್ಯಾಗಾರದಲ್ಲಿ ವಿವಿಧ ವಿಷಯಗಳ ಕುರಿತು ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ, ಇದರಲ್ಲಿ ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಪ್ರಮುಖರು ಪಾಲ್ಗೊಳ್ಳಲಿದ್ದು, ಈ ಮೂಲಕ ಜಿಲ್ಲೆಯಲ್ಲಿ ಹಾಗೂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ್ನು ಸಂಗಟಿಸಲಾಗುವುದೆಂದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ, ನಗರ ಬ್ಲಾಕ್ ಅಧ್ಯಕ್ಷ ಕಾಟನ್ ಪಾಶಾ, ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ರವಿ ಕುರಗೂಡ, ರಡ್ಡಿ ಶ್ರಿನಿವಾಸ್, ರಮೇಶ ನಾಯಕ, ಶರಣು ಬಸವಾರಜ, ಮಾನ್ವಿ ಪಾಶಾ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published.