ಹಾಸ್ಯಲೋಕದಿಂದ ನಗಿಸುವ ಕಾರ್ಯ ನಿರಂತರವಾಗಿರಲಿ : ಶಾಸಕ ಪರಣ್ಣ


12ನೇ ವರ್ಷದ ನಗೆ ಸಂಭ್ರಮ ಕಾರ್ಯಕ್ರಮ

ಕೊಪ್ಪಳ:  ಹಾಸ್ಯಲೋಕ ಸಂಘಟನೆಯಿಂದ ನಗೆ ಕಾರ್ಯಕ್ರಮಗಳನ್ನು ಆಯೋಜಿಸಿ ಜನತೆಯನ್ನು ಹಾಸ್ಯದಿಂದ ರಂಜಿಸುತ್ತಿರುವುದು ಖುಷಿ ತಂದಿದೆ. ಈ ಕಾರ್ಯ ನಿರಂತರವಾಗಿರಲಿ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಗಂಗಾವತಿ ನಗರದ ಬಾಲಕಿಯರ ಸ.ಹಿ.ಪ್ರಾ. ಶಾಲೆಯಲ್ಲಿ ಹಾಸ್ಯಲೋಕ ಸಂಘಟನೆ ಹಮ್ಮಿಕೊಂಡಿದ್ದ ೧೨ನೇ ವರ್ಷದ ನಗೆ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂತರು, ಶರಣರು ನಡೆದಾಡಿದ ಈ ಪುಣ್ಯ ಭೂಮಿಯನ್ನು ಶರಣಬಸಪ್ಪನವರಂತೆ ಎಸ್.ಎಂ.ಪಟೇಲ್,  ಪರಶುರಾಮಪ್ರಿಯ ಅವರು ಹಾಸ್ಯಲೋಕ ಸಂಘಟನೆಯ ಮೂಲಕ ನಗರದ ಜನತೆಯನ್ನು ನಗಿಸುವ ಕಾರ್ಯಕ್ಕೆ ಸದಾ ಸಹಕಾರ ಇರುತ್ತದೆ ಎಂದರು

ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಜಿ.ಪಂ ಸದಸ್ಯೆ ಶಾಂತಾರಮೇಶ ನಾಯಕ, ವಿಶೇಷ ಆಹ್ವಾನಿತ ಚಿತ್ರನಟ ಗವಿಸಿದ್ದಯ್ಯ ವಸ್ತ್ರದ್ ಮಾತನಾಡಿದರು. ಸುವರ್ಣಗಿರಿ ದಿನಪತ್ರಿಕೆ ವಿಶೇಷ ಸಂಚಿಕೆ, ನಗು ಡಿಜಿಟಲ್ ಕಾರ್ಡ್, ನಗು ಕ್ಯಾಲೆಂಡರ್, ನಗೆ ಮಾಹಿತಿ ಪತ್ರ ಇದೇ ವೇಳೆ ಬಿಡುಗಡೆ ಮಾಡಲಾಯಿತು.         ರಂಗಭೂಮಿ ಕಲಾವಿದರಾದ ಚನ್ನಬಸಯ್ಯ ಬಿ.ಟಿ., ಟಿ. ಹನುಮಂತಪ್ಪ ನಾಯಕ, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ. ನಿಂಗಜ್ಜ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಹಾಸ್ಯ ಕಲಾವಿದರಾದ ಗಂಗಾವತಿಯ ಜೆ. ಮರಿಯಪ್ಪ, ಕೂಡ್ಲಿಗಿಯ ಕೋಗಳಿ ಕೊಟ್ರೇಶ, ಬೆಂಗಳೂರಿನ ರವಿಸಂತೋಷ, ಗಂಗಾವತಿಯ ತಿಪ್ಪೇರುದ್ರಸ್ವಾಮಿ ಅವರು ತಮ್ಮ ಅದ್ಭುತ ಹಾಸ್ಯದ ಮೂಲಕ ಜನತೆಗೆ ಆಸ್ಯ ರಸದೌತಣ ಉಣಬಡಿಸಿದರು. ಹಾಸ್ಯಲೋಕ ಸಂಘಟನೆ ಅಧ್ಯಕ್ಷ ಎಸ್.ಎಂ. ಪಟೇಲ್ ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಸುನೀತಾ ಶ್ಯಾವಿ, ನವೀನ್‌ಕುಮಾರ, ಸೋಮನಾಥ ಕಂಪ್ಲಿ, ರಾಯಚೂರು ಸಂಜೆ ದಿನಪತ್ರಿಕೆಯ ಸಂಪಾದಕ ಪಿ. ಚನ್ನಬಸವ, ಮಿಡೀಯಾ ಕ್ಲಬ್ ಅಧ್ಯಕ್ಷ ರಾಮಮೂರ್ತಿ ನವಲಿ, ಹಾಸ್ಯಲೋಕ ಸಂಘಟನೆಯ ಪ್ರ. ಕಾರ್ಯದರ್ಶಿ ಎಂ. ಪರಶುರಾಮಪ್ರಿಯ ಸೇರಿದಂತೆ ಇತರರಿದ್ದರು.

 

Leave a Reply

Your email address will not be published.