ಪುರಾತನ ಹುಲಿಕೆರೆಗೆ ಶಾಸಕ ರಾಘವೇಂದ್ರ ಹಿಟ್ನಾಳ ಬಾಗಿನ ಅರ್ಪಣೆ


ಹುಲಿಕೆರೆಯ ಅಭಿವೃದ್ಧಿಗೆ ರೂ.25 ಕೋಟಿ ಅನುದಾನದ – ರಾಘವೇಂದ್ರ ಹಿಟ್ನಾಳ

ಕೊಪ್ಪಳ : ಕೊಪ್ಪಳ ಹಾಗೂ ಭಾಗ್ಯನಗರಕ್ಕೆ ಕುಡಿಯುವ ನೀರು ಒದಗಿಸುವ ನಗರದ ಪುರಾತನ  ಹುಲಿಕೆರೆಗೆ ಶಾಸಕ ರಾಘವೇಂದ್ರ ಹಿಟ್ನಾಳ ಶನಿವಾರ ಬಾಗಿನ ಅರ್ಪಿಸಿದರು.

ಕೊಪ್ಪಳ ನಗರದ ಕುಡಿಯುವ ನೀರಿನ ಬವಣೆ ನೀಗಿಸುವ ಹುಲಿಕೆರೆಗೆ ತುಂಗಭದ್ರಾ ನದಿಯ ನೀರಿನಿಂದ ತುಂಬಿಸಿದ್ದು, ಕೆರೆಯು ಭರ್ತಿಯಾದ ಹಿನ್ನಲೆಲ್ಲಿ ಕೆರೆಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ನಗರಸಭೆ ಸದಸ್ಯರು ಹಾಗೂ ಇತರೆ ಜನಪ್ರತಿನಿಧಿಗಳೊಂದಿಗೆ ಬಾಗಿನ ಅರ್ಪಿಸಿದರು.

ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತೀವ್ರ ಬರಗಾಲ ಕಾಡುತ್ತಿದ್ದರೂ ಸಹ ತುಂಗಭದ್ರೆಯ ನದಿಯ ನೀರನ್ನು ಹುಲಿಕೆರೆಗೆ ತುಂಬಿಸಲಾಗಿದೆ. ಈ ಕರೆಯ ನೀರಿನಿಂದ ಕೊಪ್ಪಳ ಮತ್ತು ಭಾಗ್ಯನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವದರಿಂದ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಪ್ರಮುಖವಾಗಿದೆ ಎಂದರು.

ಸಕಾಲಕ್ಕೆ ಮಳೆ ಇಲ್ಲದ್ದರಿಂದ ಕೆರೆ ಪೂರ್ಣವಾಗಿ ಒಣಗಿ ಹೋಗಿತ್ತು. ಕೆರೆ ತುಂಬಿಸುವ ಯೋಜನೆಯಲ್ಲಿ ಈ ಪುರಾತನ ಕೆರೆಗೆ ನೀರನ್ನು ತರುವ ಮೂಲಕ ಈ ಭಾಗದಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಕೆಲಸ ಮಾಡಿದ್ದು, ಇದರಿಂದ ಬೇಸಿಗೆಯಲ್ಲಿಯೂ ಸಹ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೆರೆ ತುಂಬಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸುವದಕ್ಕಾಗಿ ಸುಮಾರು 25 ಕೋಟಿ ರುಪಾಯಿ ಯೋಜನೆಯನ್ನು ರೂಪಿಸಲಾಗಿದ್ದು, ಇದಕ್ಕೆ ಅನುದಾನ ಒದಗಿಸಿ ಕಾಮಗಾರಿ ಆರಂಭಿಸಲಾಗುವದೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ನಗರ ಬ್ಲಾಕ್ ಅಧ್ಯಕ್ಷ ಕಾಟನ್ ಪಾಶಾ, ನಗರಸಭೆ ಸದಸ್ಯರಾದ ಮಹೇಂದ್ರ ಛೋಪ್ರಾ, ಅಕ್ಬರ್ ಪಾಶಾ ಪಲ್ಟನ್, ಅಜೀಮುದ್ದಿನ್ ಅತ್ತಾರ್, ಗುರುರಾಜ ಹಲಗೇರಿ, ಮಂಜುನಾಥ ಜಿ. ಗೊಂಡಬಾಳ, ಹೊನ್ನೂರಸಾಬ್ ಭೈರಾಪೂರ, ಕೆಪಿಸಿಸಿ ಮಹಿಳಾ ರಾಜ್ಯ ಕಾರ್ಯದರ್ಶಿ ಕಿಶೋರಿ ಬೂದನೂರ, ಮಾಜಿ ನಗರಸಭೆ ಸದಸ್ಯ ಮಾನ್ವಿ ಪಾಶಾ, ಜಿಲ್ಲಾ ವಕ್ತಾರ ಕುರಗೋಡ ರವಿ, ಮಾಜಿ ಕುಡಾ ಅಧ್ಯಕ್ಷ ಜುಲ್ಲು ಖಾದರ್ ಖಾದ್ರಿ, ಶ್ರೀನಿವಾಸ್ ಪಂಡಿತ್, ಮುಖಂಡರಾದ ಶಾಂತಣ್ಣ ಮುದಗಲ್, ದ್ಯಾಮಣ್ಣ ಚಿಲವಾಡಗಿ, ಅರ್ಜುನ್‍ಸಾ ಕಾಟವಾ, ಯಮನೂರಪ್ಪ ನಾಯಕ, ಮಾರುತಿ ಕಾರಟಗಿ, ರಮೇಶ ಗಿಣಗೇರಿ, ಗವಿಸಿದ್ದಪ್ಪ ಚಿನ್ನೂರ, ವಾಜೀದ್ ಎಂ.ಎ. ಇತರರು ಇದ್ದರು.

Leave a Reply

Your email address will not be published.