ಜಿಲ್ಲಾಧಿಕಾರಿ ವರ್ಗಾವಣೆಗೆ ಹುನ್ನಾರ ವಿರೋಧಿಸಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ


ಕೊಪ್ಪಳ : ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರ ವರ್ಗಾವಣೆಗೆ ಹುನ್ನಾರ ನಡೆದಿದೆ ಎಂದು ಆರೋಪಿಸಿ ಮತ್ತು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡದಿರಲು ಆಗ್ರಹಿಸಿ ನಗರದ ಗಂಜ್ ಸರ್ಕಲ್‌ದ ಬಸವೇಶ್ವರ ಪುತ್ಥಳಿ ಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು.

ಬೆಳಗಾವಿಯ ಅಧಿವೇಶನದಲ್ಲಿ ಶಾಸಕರಾದ ಗೋವಿಂದ ಕಾರಜೋಳರವರು ತಮಗೆ ಸಂಬಂಧಿಸಿ ಕ್ಷೇತ್ರವಲ್ಲದಿದ್ದರೂ ಜಿಲ್ಲಾಧಿಕಾರಿ ಸುನೀಲಕುಮಾರ ಬ್ರಿಟೀಷರ ಪಳಯುಳಿಕೆಯಂತಿದ್ದಾರೆ, ಅಂಥ ಅಹಂಕಾರಿಯನ್ನು ವರ್ಗಾಯಿಸಿರೆಂದು ಆಕ್ರೋಶ ವ್ಯಕ್ತಪಡಿಸಿದ್ದು ಮಾಧ್ಯಮದಲ್ಲಿ ಪ್ರಚಾರವಾಗಿದೆ ಮತ್ತು ಅವರ ವರ್ಗಾವಣೆಗೆ ಸ್ಥಳೀಯ ಜನಪ್ರತಿನಿಧಿಗಳು ಎತ್ತಂಗಡಿಗೆ ಹುನ್ನಾರ ನಡೆಸಿದ್ದಾರೆಂದು ದೂರಲಾಗಿದೆ.

ಕಳೆದ ಆಗಸ್ಟ್‌ನಲ್ಲಿ ಕೊಪ್ಪಳಕ್ಕೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ ಸುನೀಲಕುಮಾರವರು ಉತ್ಸಾಹಿ ಯುವಕರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಾಗಿ ಜಿಲ್ಲೆಯಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ, ತಮ್ಮ ಭ್ರಷ್ಠತೆಗೆ ಮರಳು ಮಾಫಿಯಾಕ್ಕೆ ಅನುಕೂಲವಾಗಲಿಲ್ಲ ಎನ್ನುವ ಕಾರಣಕ್ಕಾಗಿ ರಾಜಕಾರಣಿಗಳು ಎತ್ತಂಗಡಿಗೆ ಪ್ರಯತ್ನಿಸುತ್ತಿದ್ದಾರೆಂದು ಸಂಘಟನೆಗಳ ಮುಖಂಡರಾದ ವಿಠ್ಠಪ್ಪ ಗೋರಂಟ್ಲಿ, ಬಸವರಾಜ್ ಶೀಲವಂತರ್, ಡಿ.ಎಚ್.ಪೂಜಾರ್ ಹೇಳಿದರು.

ಪ್ರತಿಭಟನೆ ನೇತೃತ್ವವನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ, , ಮಹಾಂತೇಶ ಕೊತಬಾಳ, ಜೆ.ಭಾರದ್ವಾಜ್,ಕಾಸಿಂ ಸರದಾರ, ಎಸ್.ಎ.ಗಫಾರ, ಹನುಮೇಶ ಮ್ಯಾಗಳಮನಿ, ಭೀಮಣ್ಣ ದೇವರಮನಿ, ನಿಂಗಪ್ಪ ದೇವರಮನಿ, ಗಾಳೇಶ ಕಾತರಕಿ, ಗುಡ್ಡದಪ್ಪ ಭಂಗಿ, ಸಣ್ಣ ಹನುಮಂತಪ್ಪ, ರಮೇಶ ಚಿಕ್ಕೇನಕೊಪ್ಪ, ಗಾಳೆಪ್ಪ ಮುಂಗೋಲಿ ಸೇರಿದಂತೆ ಮತ್ತೀತರರು ವಹಿಸಿದ್ದರು.

Leave a Reply

Your email address will not be published.